ಕುಂದಾಪುರ(ಜ,13): ಭಾರತ ಸರಕಾರದ ಶಿಕ್ಷಣ ಮಂತ್ರಾಲಯವು ನವದೆಹಲಿಯಲ್ಲಿ ನಡೆಸಿದ ರಾಷ್ಟ್ರಮಟ್ಟದ 2023-2024ನೇ ಸಾಲಿನ ಕಲೋತ್ಸವದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಕಂಚಿನ ಪದಕ ಗಳಿಸಿರುತ್ತಾಳೆ.
ಈಕೆ ದೇವಲ್ಕುಂದದ ಅಶೋಕ ಮತ್ತು ನಾಟ್ಯ ಗುರು ವಿದೂಷಿ ಪ್ರವಿತಾ ಇವರ ಪುತ್ರಿ.