ಕುಂದಾಪುರ (ಫೆ.22): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ವಾಟರ್ ಫಿಲ್ಟರ್ ಹಸ್ತಾಂತರ ಕಾರ್ಯಕ್ರಮವು ಮಾನ್ಯ ಶ್ರೀ ಜಯಶೀಲ ಶೆಟ್ಟಿ ಹೆಚ್, ನಿವೃತ್ತ ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆ ಇವರ ಉಪಸ್ಥಿತಿಯಲ್ಲಿ ನಡೆಯಿತು.
ನೀಲಾವರ ಮಕ್ಕಿತೋಟ ಮನೆ ಶ್ರೀಮತಿ ಗೌರಿ ವಿಠಲಶೆಟ್ಟಿ ಇವರ ಸ್ಮರಣಾರ್ಥವಾಗಿ 45 ಸಾವಿರ ರೂಪಾಯಿ ಮೌಲ್ಯದ ವಾಟರ್ ಫಿಲ್ಟರ್ ಕೊಡುಗೆ ನೀಡಿದ ದಾನಿಗಳಾದ ಶ್ರೀ ನಾಗರಾಜ ಶೆಟ್ಟಿ ಮಕ್ಕಿತೋಟ ಮನೆ ನೀಲಾವರ, ಉದ್ಯಮಿಗಳು ಬೆಂಗಳೂರು ಇವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಪದವಿ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದಶ್ರೀ ಬಾಲಕೃಷ್ಣ ಶೆಟ್ಟಿ,ಶ್ರೀಶಾಂತರಾಮ್ ಶೆಟ್ಟಿ, ಉಪನ್ಯಾಸಕರು ನಿಟ್ಟೆ,ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಪ್ರತಾಪ್ ಚಂದ್ರ ಹೆಗ್ಡೆ ಕೈಲ್ಕೆರೆ,ಗ್ರಾ. ಪಂ ಸದಸ್ಯರಾದ ಶ್ರೀ ಮನೋಜ್ ಕುಮಾರ್ ಶೆಟ್ಟಿ,ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಪ್ರಾಂಶುಪಾಲರಾದ ಪ್ರೊ ಉಮೇಶ್ ಶೆಟ್ಟಿ ಕೊತ್ತಾಡಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಉದ್ಯಮಿಗಳಾದ ಶ್ರೀ ಉದಯ ಶೆಟ್ಟಿ ಕೊಂಗೇರಿ, ಉಪನ್ಯಾಸಕರಾದ ಶ್ರೀ ಅಕ್ಷಯ್ ಹೆಗ್ಡೆ ,ದೀಪಾ ಪೂಜಾರಿ, ಶ್ರೀ ಚಂದ್ರಶೇಖರ್ ಶೆಟ್ಟಿ ಕಂಬಳ ಗದ್ದೆ ಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗೋವಿಂದ ಎಸ್. ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ,ಶಾಲಾ ಶಿಕ್ಷಕರಾದ ಶ್ರೀ ವೆಂಕಟ ಕುಲಾಲ್, ಶ್ರೀಮತಿ ಶೋಭಾ ಸಿ ಶೆಟ್ಟಿ, ಶ್ರೀ ಗಣೇಶ್ ಶೆಟ್ಟಿ, ಶ್ರೀ ಆದರ್ಶ ಹಾಗೂ ಹಳೆ ವಿದ್ಯಾರ್ಥಿಗಳಾದ ಶ್ರೀ ಸಂಪತ್ ಕುಮಾರ್ ಶೆಟ್ಟಿ, ಹಾಗೂ ಕುಮಾರಿ ನಿಧಿ ಶೆಟ್ಟಿ ಉಪಸ್ಥಿತರಿದ್ದರು.