ಕುಂದಾಪುರ ( ಫೆ.22): ರಾಯಚೂರು ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಿಂದ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ಜಗತ್ಪ್ರಸಿದ್ಧ ಪರಿಮಳ ಪ್ರಶಸ್ತಿಯನ್ನು ನಮ್ಮ ಕುಂದಾಪುರದವರಾದ ಉದ್ಯಮಿ, ಸಮಾಜ ಸೇವಕ,ದಿನೇಶ್ ವೈದ್ಯ ಅಂಪಾರು ಆಯ್ಕೆ ಆಗಿದ್ದಾರೆ ಎಂದು ಮಂತ್ರಾಲಯ ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸುಭುಧೇಂದ್ರ ತೀರ್ಥರು ಮಾರ್ಚ್ 17 ರ ಸಂಜೆ ಮಠದ ರಂಗಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿರುದು ಪತ್ರ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಪೂಜಿಸಿರುವ ಪಂಚಲೋಹದ ಬೃಂದಾವನ ವಿಗ್ರಹ, ಪ್ರಶಸ್ತಿ ಫಲಕ, ಗೌರವಿಸಲಿದ್ದಾರೆ.
ದಿನೇಶ್ ವೈದ್ಯ ಅವರಿಗೆ ಈ ಪ್ರಶಸ್ತಿಯು ಉದ್ಯಮ ಕ್ಷೇತ್ರ ಮತ್ತು ಸಮಾಜಸೇವೆಯನ್ನು ಗುರುತಿಸಿ ಮಠದ ಆಡಳಿತ ಮಂಡಳಿಯ ನೀಡುತ್ತಿದೆ
ವರದಿ.ರಾಘವೇಂದ್ರ ಹಾರ್ಮಣ್