ಹೆಮ್ಮಾಡಿ (ಏ. 03): ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿರುವ ಶಿಲಾ ಧ್ವಜಸ್ತoಭಕ್ಕೆ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ ನೇತ್ರತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಅಂದಾಜು 5,50,000 ಒಟ್ಟು ವೆಚ್ಚದಲ್ಲಿ ನಿರ್ಮಿಸಲಾದ ತಾಮ್ರ ಮತ್ತು ಪೀಠಕ್ಕೆ ಹಿತ್ತಾಳೆ ಹೊದಿಕೆಯನ್ನು ಏಪ್ರಿಲ್ 1ರಿಂದ 4 – 2025 ರ ವರೆಗೆ ನಡೆದ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಪುನರ್ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆ ಗೊಳಿಸಲಾಯಿತು.
ಜೊತೆಗೆ ಗೋಪುರದ ಮುಂಭಾಗದಲ್ಲಿ ನೂತನ ನಾಮಫಲಕ ವನ್ನು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ರೀ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮೊಗವೀರ ಯುವ ಸಂಘಟನೆಯ ಸದಸ್ಯರುಗಳು ಹಾಗೂ ದೇವಿಯ ಸದ್ಭಕ್ತರು ಉಪಸ್ಥಿತರಿದ್ದರು.