ತ್ರಾಸಿ(ಫೆ.26): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೇರಿ ಚೌಕಿ ಸುಬ್ಬಯ್ಯ ಖಾವಿ೯ ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸ್ವರಾಜ್ಯ ೭೫ ತಂಡದ 29ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮ ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪ್ರಥಮ ದಜೆ೯ ಕಾಲೇಜು ಬೈಂದೂರು ,ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ,ನವಮಿ ಡಾಟ್ ಕಾಂ ಕೊಡೇರಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕದ ಸಹಕರದೊಂದಿಗೆ ಕಾಯ೯ಕ್ರಮ ಯಶಸ್ವಿಗೊಳಿಸಲಾಯಿತು.
ಕಾಯ೯ಕ್ರಮ ಅಧ್ಯಕ್ಷತೆಯನ್ನು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿದ್ದರು. ಡಾ.ಲತಾ ಪೂಜಾರಿ ಯವರು ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆ ಗೈದು ಕಾಯ೯ಕ್ರಮಕ್ಕೆ ಚಾಲನೆ ನೀದಿದರು. ಕುಂದನಾಡು ಅಧ್ಯಯನ ಕೇಂದ್ರದ ಮುಖ್ಯಸ್ಥರು ಉಪ್ಪುಂದ ಚಂದ್ರಶೇಖರ ಹೊಳ್ಳ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀರಾಜ್ ಗುಡಿ ವಿಚಾರ ಹಂಚಿಕೊಂಡರು. ಕ್ರಾಂತಿವೀರ ಸಾವಕ೯ರ್ ಯಶೋಗಾಥೆಯ ವಿಚಾರವನ್ನು ಕುಮಾರಿ ಮನ್ವಿತಾ.ಎಸ್ ಹಂಚಿಕೊಂಡರು.
ಗಣ್ಯರಾಗಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ,ಶಾಂತಿ ಗೋವಿಂದರಾಜ್, ವಿಠಲ್ ಖಾವಿ೯ ಕೊಡೇರಿ,ವೆಂಕಟೇಶ್ ನಾವುಂದ,ವಿಜಯ ನರಸಿಂಹ ಐತಾಳ ವಿಚಾರ ಹಂಚಿಕೊಂಡರು.
ಕಾಯ೯ಕ್ರಮದಲ್ಲಿ ಶಿವರಾಮ್ ಖಾವಿ೯ ,ಚಂದನ್ ಗೌಡ,ವಿಜಯ್ ಕೊಡೇರಿ , ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿಧ್ಯಾಥಿ೯ ಕುಟುಂಬಸ್ಥರು,ಉಪಸ್ಥಿತರಿದ್ದರು. ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರು ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು. ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್ ಧನ್ಯವಾದಗೈದರು. ಕುಮಾರಿ ರಕ್ಷಿತಾ ನಿರೂಪಿಸಿದರು.