ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ತನ್ನ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ಅಪ೯ಣೆಯಾದರು. ಇನ್ನೂ ಕೆಲವರು ತನ್ನ ಸಂಪೂಣ೯ ಸಮಯವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದರು.ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆ ಕಡಿಮೆ ಇಲ್ಲಾ. ಹೊಟ್ಟೆಗೆ ಹಿಟ್ಟಿಲ್ಲವಾದರೂ ದೇಶ ಭಕ್ತಿಗೇನು ಕಡಿಮೆ ಇಲ್ಲಾ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಸೇವೆ ಯನ್ನು ನೀಡಿದ ಅವಳಿ ದಕ್ಷಿಣ ಕನ್ನಡ ಜಿಲ್ಲೆ(ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ) .
ಕ್ರಿ.ಶ 1919 ಕಾಲಮಾನ ಅದು ಗಾಂಧೀಜಿಯವರ ಪ್ರೇರಣೆಯಿಂದ ಆಗಭ೯ ಶ್ರೀಮಂತರಾದ ಮಂಗಳೂರು ಭಾಗದ ಕಾನಾ೯ಡು ಸದಾಶಿವ ರಾಯರು ತನ್ನ ಸಂಪೂಣ೯ವಾಗಿ ಸಮಯ ವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಂಬೈಯಲ್ಲಿರುವ ಮಹಾತ್ಮ ಗಾಂಧೀಜಿಯವರ ಭೇಟಿ ಮಾಡಿ ಸತ್ಯಾಗ್ರಹದ ಆಂದೊಲನಕ್ಕೆ ಸಹಿ ಹಾಕುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬಹು ದೊಡ್ಡ ಸ್ವಾತಂತ್ರ್ಯ ಹೋರಾಟಗಾರರ ಆಂಧೋಲನವಾಗಬೇಕು ಎಂದು ಗಾಂಧೀಜಿಯವರನ್ನ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಪ್ರವಾಸ ನಿಶ್ಚಯಿಸಿಕೊಳ್ಳುತ್ತಾರೆ. ಅದರಂತೆ ಫೆಬ್ರವರಿ 24,25,26,27 1934 ರಂದು ಮಂಗಳೂರು ಭಾಗ ನಿಶ್ಚಯಿಸಿ 24 ರಂದು ಮಂಗಳೂರು ಭಾಗಕ್ಕೆ ಬರುತ್ತಾರೆ.
ಮಂಗಳೂರು ಭಾಗದಲ್ಲಿ ಹಬ್ಬಿದ ಸ್ವಾತಂತ್ರ್ಯ ಹೋರಾಟಗಾರರ ಕಾವು ಬಹಳ ಬೇಗ ಉಡುಪಿ ಕುಂದಾಪುರ ಭಾಗಕ್ಕೂ ಹಬ್ಬಿತ್ತು.ಮಂಗಳೂರು ಭಾಗ ಮುಗಿಸಿಕೊಂಡು ಫೆಬ್ರವರಿ 25 ರಂದು ಉಡುಪಿ ಉದ್ಯಾವರ ತಲುಪಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿ ಮಾಡುತ್ತಾರೆ. ಬಂಟಕಲ್ಲು ಲಕ್ಷ್ಮೀ ನಾರಾಯಣ ಶಮಾ೯, ,ಎಸ್.ಫಣಿಯಾಡಿಯವರೊಂದಿಗೆ ಮಲ್ಪೆ ಶಂಕರನಾರಾಯಣ ಸಾಮಗರ ನೇತ್ರತ್ವದ ಮುಖಂಡರಿಂದ ಉಡುಪಿಯಿಂದ ಕಾವು ಬಹಳ ಬೇಗ ಕುಂದಾಪುರ ತಲುಪಿದಂತೆ ಕುಂದಾಪುರ ಕೊಳ್ಕೈಬೈಲು ಮಹಾಬಲ ಶೆಟ್ಟಿ,ಅಮಾಸೆಬೈಲು ಕೃಷ್ಣರಾಯ ಕೊಡ್ಗಿ,ಓಣಿಮನೆ ಅಣ್ಣಪ್ಪ ಕಾರಂತರಂತಹ ನಾಯಕತ್ವ ದಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಬಲ ಬರುವಂತೆ ಮತ್ತಷ್ಟು ಅಭಿಮಾನಿಗಳು ಸೇರ ತೊಡಗಿದರು.
ಕ್ರಿ.ಶ 1934ರ ಫೆಬ್ರವರಿ 25 ರ ಬೆಳಿಗ್ಗೆ ಉಡುಪಿ ಕಾಯ೯ಕ್ರಮ ಮುಗಿಸಿ ನೇರವಾಗಿ ಕುಂದಾಪುರದ ನರಿಬೇಣದ ಎದುರುಗಡೆ ಇರುವ ಶಾಂತಿನಿಕೇತನದ ಗೋಪಾಲ ಕೃಷ್ಣ ಕಾಮತ್ ಮನೆಯಲ್ಲಿ ತಂಗುತ್ತಾರೆ. ಉಡುಪಿ ಭಾಗವೆಂದಾಗ ಗಾಂಧೀಜಿಯವರಿಗೆ ಆತ್ಮೀಯತೆ ಹೆಚ್ಚು ಕಾರಣ ದೇಣಿಗೆ ಸಂಗ್ರಹ ಮಾಡುವ ಸಮಯದಲ್ಲಿ ವಡವೆಯನ್ನು ಗಾಂಧೀಜಿಯವರ ಜೋಳಿಗೆಗೆ ಹಾಕಿದ ಘಟನೆ ಉಡುಪಿ ಭಾಗದಲ್ಲಿ ಕಂಡು ಬರುತ್ತದೆ.
ಕುಂದಾಪುರ ಭಾಗಕ್ಕೆ ಬಂದಾಗ ಕೊಳ್ಕೈಬೈಲು ಮಹಾಬಲ ಶೆಟ್ಟಿ ಸೌಕೂರು,ಗುಳ್ವಾಡಿ, ಭಾಗದಲ್ಲಿ ಹಣ ಸಂಗ್ರಹಮಾಡಿ ಗಾಂಧೀಜಿಯವರ ಜೋಳಿಗೆ ಹಾಕುತ್ತಾರೆ. ಕುಂದಾಪುರ ಭಾಗವನ್ನು ಭೇಟಿ ನೀಡಿ ಫೆಬ್ರವರಿ 26ರಂದು ಕುಂದಾಪುರ ಭಾಗದಲ್ಲಿ ಸಮಯ ವನ್ನು ನೀಡಿ ಮರು ದಿನ ಕುಂದಾಪುರದಿಂದ ಬೈಂದೂರು ಭಾಗವಾಗಿ ದಯಾವತಿ ಹಡಗಿನ ಮೂಲಕ ಉತ್ತರ ಕನ್ನಡ ಭಾಗ ವನ್ನು ತೆರಳುತ್ತಾರೆ.
ಇಂದಿಗೆ ಗಾಂಧೀಜಿಯವರು ಭೇಟಿ ನೀಡಿ 90 ವಷ೯ಗಳು ಕಳೆದಿದೆ. ಅಂದಿನ ದಿನಾಂಕ ವಾರ ಎಲ್ಲವೂ ಸಮಾನವಾಗಿರುವುದು ವಿಶೇಷವೆನ್ನಿಸುತ್ತಿದೆ. ಅಂದಿನ ದಿನ ವಾರ
24.02.1934. ಶನಿವಾರ. ಮಂಗಳೂರು ಭೇಟಿ
25.02.1934 ಭಾನುವಾರ ಉಡುಪಿ ಭೇಟಿ ಸಂಜೆ ಹೊತ್ತು ಕುಂದಾಪುರ ನರಿಬೇಣದ ಎದುರಿನ ಶಾಂತಿನಿಕೇತನ ರಸ್ತೆ ಯ ಗೋಪಾಲ ಕೃಷ್ಣ ಕಾಮತ್ ಮನೆಯಲ್ಲಿ ತಂಗುತ್ತಾರೆ.
26.02.1934 ರ ಸೋಮವಾರ ಕುಂದಾಪುರ ದಲ್ಲಿ ಪೂಣ೯ ಸಮಯ ನೀಡಿದರು.
27.02.1934 ರ ಮಂಗಳವಾರ ಬೆಳಿಗ್ಗೆ ದಯಾವತಿ ಹಡಗಿನ ಮೂಲಕ ಉತ್ತರ ಕನ್ನಡ ಭಾಗಕ್ಕೆ ತೆರಳಿದರು.
ಇಂದಿನ ದಿನ
24.02.2024 ಶನಿವಾರ
25.02.2024 ಭಾನುವಾರ
26.02.2024 ಸೋಮವಾರ
27.02.2024 ಮಂಗಳವಾರ
ಲೇಖನ : ಪ್ರದೀಪ ಕುಮಾರ್ ಬಸ್ರೂರು