ಕುಂದಾಪುರ ( ಮಾ.21): ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಸ್ಪರ್ಧೆಯಲ್ಲಿ, ಮುಲ್ಲಕಾಡು ಸರ್ಕಾರಿ ಶಾಲೆಯ ಶಿಕ್ಷಕ ದಂಪತಿ ವಿಶೇಷ ಸಾಧನೆ ಮಾಡಿದ್ದಾರೆ.
ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ, ದಾಖಲೆಯ ಈಜುಪಟು, ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ,100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 200 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, x50 ಮೀ. ಫ್ರೀ ಸ್ಟೈಲ್ ರಿಲೇ ಚಿನ್ನದ ಪದಕ, ಪಡೆದು ಸತತ ಎಂಟನೆಯ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಹ ಶಿಕ್ಷಕಿ, ರಾಷ್ಟ್ರೀಯ ಈಜುಪಟು ಕೃಪಾ 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 100 ಮೀ. ಬ್ಯಾಕ್ ಸ್ಟ್ರೋಕ್ ಚಿನ್ನದ ಪದಕ,
100 ಮೀ. ಫ್ರೀ ಸ್ಟೈಲ್ ಬೆಳ್ಳಿ ಪದಕ, ಪಡೆದು ಸತತ ನಾಲ್ಕನೆಯ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ದಂಪತಿಯ ಈ ಸಾಧನೆಗಾಗಿ ಮುಖ್ಯೋಪಾಧ್ಯಾಯರಾದ ಜಿ.ಉಸ್ಮಾನ್ ಮತ್ತು ವೇಣುಗೋಪಾಲ್ ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ. ಇವರು ರೇಷ್ಮೆ ಇಲಾಖೆಯ ಇನ್ಸ್ಪೆಕ್ಟರ್ ಬಿ.ಕೆ.ನಾಯ್ಕ್ ಅವರಲ್ಲಿ ಈಜು ತರಬೇತಿ ಪಡೆದಿರುತ್ತಾರೆ.