ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇಸಿಕ್ ಸೈನ್ಸ್ ವಿಭಾಗದ ಇಂಡಕ್ಷನ್ ಪ್ರೋಗ್ರಾಂ ವತಿಯಿಂದ ಕ್ರಿಯೇಟಿವ್ ಆರ್ಟ್ಸ್ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ತಾರ ಹಳ್ಳಿಹೊಳೆ ತಂಡದ ರಾಜೇಂದ್ರ ಹಳ್ಳಿಹೊಳೆ, ಗಿರೀಶ್ ವಕ್ವಾಡಿ ಹಾಗೂ ರಾಘವೇಂದ್ರ ಅವರು ಆಗಮಿಸಿದ್ದರು.
ವಿದ್ಯಾರ್ಥಿಗಳಿಗೆ ಭಾವಚಿತ್ರ ರಚನೆ, ವರ್ಲಿ ಆರ್ಟ್ ಹಾಗೂ ಮುಖವಾಡ ತಯಾರಿಕೆ ಎಂಬ ಮೂರು ವಿಭಾಗಗಳಲ್ಲಿ ಪ್ರತ್ಯೇಕ ತರಬೇತಿಯನ್ನು ನೀಡಲಾಯಿತು. ಶ್ರೀ ರಾಜೇಂದ್ರ ಅವರು ವರ್ಲಿ ಆರ್ಟ್ ಕಲೆಯನ್ನು ಪರಿಚಯಿಸಿ ವಿಭಿನ್ನ ರೀತಿಯಲ್ಲಿ ಚಿತ್ರಗಳನ್ನು ಬರೆದು ತಿಳಿಸಿಕೊಟ್ಟರು. ಶ್ರೀ ಗಿರೀಶ್ ಅವರು ಮುಖವಾಡ ತಯಾರಿಕೆಯ ಬಗ್ಗೆ ಮಾಹಿತಿ ನೀಡಿ ವಿಧ್ಯಾರ್ಥಿಗಳಿಂದ ವಿವಿಧ ಬಗೆಯ ಮುಖವಾಡವನ್ನು ತಯಾರಿಸುವಲ್ಲಿ ತರಬೇತಿ ನೀಡಿದರು. ಇನ್ನೋರ್ವ ಅತಿಥಿಗಳಾದ ಶ್ರೀ ರಾಘವೇಂದ್ರ ಅವರು ಭಾವಚಿತ್ರ ರಚನೆಗೆ ಬೇಕಾದ ಮೂಲಭೂತ ವಿಷಯಗಳ ಬಗ್ಗೆ ಚಿತ್ರ ಸಮೇತ ವಿವರಿಸಿದರು. ಪಾಠದ ಜೊತೆಗೆ ಇಂತಹ ಪಠ್ಯೆತರ ಚಟುವಟಿಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅತಿಥಿಗಳು ಅಭಿಪ್ರಾಯ ನೀಡಿದರು. ವಿದ್ಯಾರ್ಥಿನಿ ಪ್ರಾದ್ಯ ಸ್ವಾಗತಿಸಿ, ಪ್ರೊಫ಼ೆಸರ್ ಸೂಕ್ಷ್ಮ ಅಡಿಗ ವಂದಿಸಿದರು. ಪ್ರಥಮ ವರ್ಷದ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.