ಉಡುಪಿ (ಏ,13): ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಏಪ್ರಿಲ್ 13 ರಂದು ನಡೆದ ಅಂತರಾಷ್ಟ್ರೀಯ ಲಯನ್ ಸಂಸ್ಥೆ 317 ಸಿ ಜಿಲ್ಲೆಯ 21 ನೆಯ ಜಿಲ್ಲಾ ಸಮ್ಮೇಳನದ ಕಾರ್ಯಕ್ರಮದಲ್ಲಿ ಯುವ ಸಂಘಟಕ, ಪ್ರಾಧ್ಯಾಪಕ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಇವರನ್ನು ಜಿಲ್ಲೆಯ ವತಿಯಿಂದ ಜಿಲ್ಲಾ ಗವರ್ನರ್ ಡಾ ನೇರಿ ಕರ್ನೆಲಿಯೂ ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಗವರ್ನರ್ ನೇರಿ ಕರ್ನೆಲಿಯೋ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ನಾನು ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗಿನಿಂದಲೂ ನಿತ್ಯಾನಂದ ಶೆಟ್ಟಿಯವರನ್ನು ಸಂಪೂರ್ಣವಾಗಿ ಬಲ್ಲವನಾಗಿದ್ದೇನೆ. ಅವರ ಸಂಘಟನಾ ಚಾತುರ್ಯ ಎಲ್ಲರನ್ನು ಹುಬ್ಬೇರಿಸುವಂಥದ್ದು. ಅದು ಇತ್ತೀಚಿಗೆ ನಡೆಸಿದ ಭಾವೈಕ್ಯ ಬಂಟರ ಮಹಾ ಸಮಾಗಮ ಎನ್ನುವ ಅಭೂತಪೂರ್ವ ಕಾರ್ಯಕ್ರಮವೇ ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿ. ಇಂತಹ ವ್ಯಕ್ತಿ ನಮ್ಮ ಜಿಲ್ಲೆಯ ಲಯನ್ಸ್ ಸದಸ್ಯರೆಂದು ಹೇಳಿ ಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಂತರಾಷ್ಟ್ರೀಯ ಲಯನ್ಸ್ ನಿರ್ದೇಶಕರಾದ ಲ. ಪಿ.ವಿ. ನಂದಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲ. ಬಿ.ಎಸ್. ರಾಜಶೇಖರಯ್ಯ, ಪ್ರಥಮ ಜಿಲ್ಲಾ ಗವರ್ನರ್ ಲ. ಮಹಮದ್ ಹನೀಫ್, ದ್ವಿತೀಯ ಜಿಲ್ಲಾ ಗವರ್ನರ್ ಲ.ಶ್ರೀಮತಿ ಸ್ವಪ್ನ ಸುರೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲ.ರವಿರಾಜ್ ನಾಯಕ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಲ. ರಿಚ್ಛರ್ಡ ಡಯಾಸ್, ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಲ. ಅರುಣ್ ಕುಮಾರ್ ಹೆಗ್ಡೆ, ಸಲಹಾ ಸಮಿತಿಯ ಲ. ಎನ್.ಎಂ. ಹೆಗಡೆ, ಕಾರ್ಯದರ್ಶಿ ಲ. ದಿನಕರ್ ಶೆಟ್ಟಿ, ಕೋಶಾಧಿಕಾರಿ ಲ.ಹರೀಶ್ ಎಂ.ಯು ಉಪಸ್ಥಿತರಿದ್ದರು. ಲ. ವಸಂತರಾಜ್ ಶೆಟ್ಟಿ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.