ಗಂಗೊಳ್ಳಿ(ಮೇ,26): ಪಿಯುಸಿ ಎರಡನೇ ಹಂತದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅಗ್ರ 10 ರ್ಯಾಂಕ್ ಗಳಲ್ಲಿ ಸ್ಥಾನ ಪಡೆಯುವ ಮುಖೇನ ಒಟ್ಟಾರೆ ಮೂರು ರ್ಯಾಂಕ್ಗಳನ್ನು ಕಾಲೇಜು ಗಳಿಸಿಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ 600ರಲ್ಲಿ 591 ಅಂಕಗಳನ್ನು ಪಡೆದ ಹರ್ಷಿತಾ ಎಸ್ ಪೂಜಾರಿ ಎಂಟನೇ ರ್ಯಾಂಕ್ ಗಳಿಸಿದರೆ ಇಂಚರ ಆರ್ ದೇವಾಡಿಗ 600 ರಲ್ಲಿ 589 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಹತ್ತನೇ ರ್ಯಾಂಕ್ ಗಳಿಸಿದ್ದಾರೆ.
ಮೊದಲ ಹಂತದ ಪರೀಕ್ಷೆಯಲ್ಲಿ 600 ರಲ್ಲಿ 590 ಅಂಕಗಳನ್ನು ಗಳಿಸುವ ಮೂಲಕ ನೇಹಾ ಎಸ್ ಕೊಡೇರಿ 9ನೇ ರ್ಯಾಂಕ್ ಗಳಿಸಿದ್ದರು. ಕಾಲೇಜು ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ. ವಿದ್ಯಾರ್ಥಿಗಳ ಈ ಎಲ್ಲಾ ಸಾಧನೆಗಳನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಭೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.