ಕುಂದಾಪುರ(ಮೇ,24):ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ಮೇ 24ರಂದು ನಡೆದ ಉಡುಪಿ ಜಿಲ್ಲಾ ಅತ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕುಂದಾಪುರದ ಟ್ರ್ಯಾಕ್ & ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ಕ್ರೀಡಾ ಪಟುಗಳು ಉತ್ತಮ ಸಾಧನೆಗೈದಿದ್ದಾರೆ.
ಎಂಟು ವರ್ಷ ಒಳಗಿನ ಹುಡುಗಿಯರ ವಿಭಾಗದಲ್ಲಿ ಶ್ರುತಾ ಶೆಟ್ಟಿ ಬಾಲ್ ಥ್ರೋ ನಲ್ಲಿ ಚಿನ್ನದ ಪದಕ, 40ಮೀಟರ್ ಓಟದಲ್ಲಿ ಕಂಚಿನ ಪದಕ,
ಹತ್ತು ವರ್ಷ ಒಳಗಿನ ಹುಡುಗಿಯರ ವಿಭಾಗದಲ್ಲಿ ಅರ್ಥಾ ಎಸ್ ಶೆಟ್ಟಿ ಬಾಲ್ ಥ್ರೋ ನಲ್ಲಿ ಚಿನ್ನದ ಪದಕ, 40ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಹಾಗೆಯೇ ಹನ್ನೆರಡು ವರ್ಷ ಒಳಗಿನ ಹುಡುಗರ ವಿಭಾಗದಲ್ಲಿ ವಿಶಾಕ್ ಜೆ ಶೆಟ್ಟಿ ಸ್ಟ್ಯಾಂಡಿಂಗ್ ಜಂಪ್ ನಲ್ಲಿ ಚಿನ್ನದ ಪದಕ, ಬಾಲ್ ಥ್ರೋ ನಲ್ಲಿ ಬೆಳ್ಳಿ ಪದಕ, ಕೃಷಿ ಶೆಟ್ಟಿ ಬಾಲ್ ಥ್ರೋ ನಲ್ಲಿ ಕಂಚಿನ ಪದಕ ಪಡೆದಿದ್ದು , ಹದಿನಾಲ್ಕು ವರ್ಷ ಒಳಗಿನ ಹುಡುಗರ ವಿಭಾಗದಲ್ಲಿ ಅಶ್ರಿತ್ ಸಂಜಯ್ ಕುಮಾರ್ ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ, ಹದಿನಾಲ್ಕು ವರ್ಷ ಒಳಗಿನ ಹುಡುಗಿಯರ ವಿಭಾಗದಲ್ಲಿ ಜಾರಾ ಗುಂಡು ಎಸೆತದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.
ಕುಂದಾಪುರ ಟ್ರ್ಯಾಕ್ ಆಂಡ್ ಫೀಲ್ಡ್ ಎನ್ನುವ ಅಥ್ಲೇಟಿಕ್ ಕೋಚಿಂಗ್ ಅಕಾಡೆಮಿ ಇದರ ತರಬೇತುದಾರ ಕ್ರೀಡಾ ಸಾಧಕ ಹಾಗೂ ಶಿಕ್ಷಕರಾದ ಪ್ರಶಾಂತ್ ಶೆಟ್ಟಿ ವಿಜೇತರಿಗೆ ಶುಭ ಕೋರಿದ್ದಾರೆ.