ಕಾರ್ಕಳ(ಜು,05):ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಕಾರ್ತಿಕ್ ಕೆ.ಎಸ್ 99.8976127 ಪರ್ಸಂಟೈಲ್ ನೊಂದಿಗೆ 698 ಅಂಕಗಳನ್ನು ಗಳಿಸಿರುತ್ತಾರೆ. ನೇಹಾ ಕೆ ಉದಪುಡಿ 99.8815839 ಪರ್ಸಂಟೈಲ್ ನೊಂದಿಗೆ 696 ಅಂಕಗಳನ್ನು ಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ.
ಇತರ ವಿದ್ಯಾರ್ಥಿಗಳಾದ ಆದಿತ್ಯ ಶೇಟ್ 687, ಆನ್ಯಾ ಡಿ.ಜೆ ಗೌಡ 683, ಪ್ರೇಮ್ ಸಾಗರ್ ಪಾಟೀಲ್ 675, ಸತೀಶ್ ಗೌಡ ಪಿ. ಎಂ 678, ಫರ್ಹಾನ್ ಟಿ.ಪಿ 675, ಸ್ನೇಹಾ ವಸ್ತ್ರದ್ 673, ಆರ್ಯ ರಾವ್ ಟಿ.ಪಿ 666, ಸಿಂಚನ ಆರ್. ಹೆಚ್ 664, ಪ್ರಿಯಾಂಕ ಕೆ.ಬಿ 660, ಸಿ ಜನಶ್ರೀ ಕುಮಾರ್ 663, ಪಂಕಜ್ ಭಟ್ 662, ಹೇಮಶ್ರೀ ಬಿ. ಕೆ 647, ವಿಶ್ರುತ ಎಂ. ಎಸ್ 645, ಅಭಿನವ್ ಹೆಚ್.ಬಿ 640, ಬಿ.ಇ ಹಿತೈಷ್ 639, ಟಿ. ಹೆಚ್ ಗಿರೀಶ್ ಗೌಡ 631, ಸೃಜನ್ ಎನ್.ಎಂ 628, ನಿಶ್ಚಯ್ ಯಡಿಯೂರ್ ಪಿ 628, ಆದಿತ್ಯ ಜೋಶಿ 620, ಅನುಷಾ ಜಿ ಕಿಣಿ 620, ಹಂಸಿನಿ ವಿ 620, ವೀರೇಂದ್ರ ಎಂ ಕೆ 614, ಕುಶಾಲ್ ಪಿ ಗೌಡ 613, ಯುವರಾಜ್ ಬಿ ಕೆ 612, ಶ್ರೇಷ್ಮಾ ಕೆ ಯು 609, ವೃಂದಾ ಪೈ ಎಂ ಡಿ 606, ಸಿದ್ದಪ್ಪ ಎಂ ಯರಗಲ್ 604, ಆಕೃತಿ ಎಸ್ ಎಸ್ 604, ಯಶವಂತ್ ಜಿ 602, ಸಿದ್ದಾಂತ್ ಆರ್ ನಾಯ್ಕ್ 601 ಅಂಕಗಳು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.
650 ರ ಮೇಲೆ 13, 600 ರ ಮೇಲೆ 33 , 550 ರ ಮೇಲೆ 86 ಮತ್ತು 500 ಅಂಕಗಳ ಮೇಲೆ 122 ವಿದ್ಯಾರ್ಥಿಗಳು ಪಡೆದಿರುತ್ತಾರೆ.ಕಳೆದ ಬಾರಿಯ 2023ರ NEET ಪರೀಕ್ಷೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು JIPMER ಮತ್ತು AIIMS ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದರು.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.