ಗಂಗೊಳ್ಳಿ (ಜು,14): ಇಲ್ಲಿನ ಯಕ್ಷಭಿಮಾನಿ ರಕ್ತದಾನಿ ಬಳಗ ಗಂಗೊಳ್ಳಿ, ಮೀನುಗಾರರ ಸಂಘ ರಿ. ಗಂಗೊಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜೂನ್ .11 ರಂದು ವಿಜಯ ವಿಠಲ ಸಭಾಭವನದಲ್ಲಿ ನಡೆಯಿತು. ಶಿಬಿರದಲ್ಲಿ 69 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.













