ಮಣಿಪಾಲ (ಜು ,14): ವಿಶ್ವ ರಕ್ತದಾನಿಗಳ ದಿನದಂದು ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಅವರು ರಕ್ತದಾನ ಅಭಿಯಾನದ ಸಮರ್ಪಣಾ ಕಾರ್ಯಕ್ಕಾಗಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ .), ಇದರ ಅಧ್ಯಕ್ಷರಾದ ಸತೀಶ್ ಸಾಲಿಯನ್ ಮಣಿಪಾಲ್ ರವರನ್ನು ಕೆಎಂಸಿ ಮಣಿಪಾಲ ಡೀನ್ ಡಾIಪದ್ಮರಾಜ್ ಹೆಗ್ಡೆ ಯವರು ಗೌರವಿಸಿದರು.
ಕುಂದಾಪುರದ ಸಹಾಯಕ ಕಮಿಷನರ್ ಶ್ರೀಮತಿ ರಶ್ಮಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ವೈದ್ಯಕೀಯ ಅಧೀಕ್ಷಕರಾದ ಡಾIಅವಿನಾಶ್ ಶೆಟ್ಟಿ,,ಬ್ಲಡ್ ಸೆಂಟರ್ ಕೆಎಂಸಿ ಮಣಿಪಾಲ ಇದರ ಮುಖ್ಯಸ್ಥರಾದ ಡಾIಶಮೀ ಶಾಸ್ತ್ರಿಹಾಗೂ ಡಾIಗಣೇಶ್ ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .