ಕುಂದಾಪುರ(ಜು 02): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಬ್ರಹ್ಮಾವರ ತಾಲೂಕಿನ ಶಿರೂರು ಮಂದಾರ್ತಿ ನಿವಾಸಿಯಾದ ಶ್ರೀ ನಿತೇಶ್ ಶೆಟ್ಟಿ ಅವರ ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10000 ರೂಪಾಯಿಯನ್ನು ಹಾಗೂ ಶಿವಮೊಗ್ಗದ ದಿನೇಶ್ ಶೆಟ್ಟಿ ಅವರ ಚಿಕಿತ್ಸೆಗೆ 10000 ರೂಪಾಯಿಯನ್ನು ಸಂಘದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚಕ್ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಬಿ.ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಶೆಟ್ಟಿ ಬಸ್ರೂರು, ಸಂಘದ ನಿಕಟಪೂರ್ವ ಕಾರ್ಯದರ್ಶಿ ಶ್ರೀ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಉಪಸ್ಥಿತರಿದ್ದರು.