ಕೋಟೇಶ್ವರ(ಜು,22): ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ಹಾಗೂ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಉಡುಪಿ ,ರೋಟರಿ ಕ್ಲಬ್ ಕೋಟೇಶ್ವರ, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ,ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಜುಲೈ 21 ರಂದು ನಡೆಯಿತು .
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷರಾದ ನಾಗರಾಜ ಬೀಜಾಡಿಸಭಾಧ್ಯಕ್ಷತೆ ವಹಿಸಿದ್ದರು ಉದ್ಘಾಟನೆ ಜಿಲ್ಲಾಧ್ಯಕ್ಷರಾದ ಜಯಂತ್ ಅಮೀನ್ ಕೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ನ ಆದ್ಯಕ್ಷರಾದ ಸತೀಶ್ ಎಂ ನಾಯ್ಕ್ ,ಬಗ್ವಾಡಿ ಹೋಬಳಿ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ,ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ನಿಕಟಪೂರ್ವ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡಕ,ರಕ್ತ ನಿಧಿ ಮಣಿಪಾಲದ ಡಾ/ಬಿಸ್ಮಿತಾ ಗೌರವಾಧ್ಯಕ್ಷರಾದ ಸುರೇಶ್ ಮೊಗವೀರ ಶಾನಾಡಿ,ಮಹಿಳಾ ಘಟಕದ ಅಧ್ಯಕ್ಷರಾದ ಉಷಾ ಬಂಗೇರ ಮಾರ್ಕೋಡು,ಚಂದ್ರ ಬಂಗೇರ,ರೋಟರಿ ಕ್ಲಬ್ ಕೋಟೇಶ್ವರ ಕಾರ್ಯದರ್ಶಿ ಸುಭಾಶ್ ಚಂದ್ರ ಶೆಟ್ಟಿ, ಜಿಲ್ಲಾ ಸಂಘಟನೆ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಸುನೀಲ್ ಜಿ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ರಾಘವೇಂದ್ರ ಹಳೆಅಳಿವೆ ವಂದಿಸಿದರು ಕಾರ್ಯಕ್ರಮವನ್ನು ಅಶೋಕ ತೆಕ್ಕಟ್ಟೆ ನಿರ್ವಹಿಸಿದರು ಒಟ್ಟು155 ಯುನಿಟ್ ರಕ್ತ ಸಂಗ್ರಹಿಸಲಾಯಿತು.