ಗಂಗೊಳ್ಳಿ (ಆ,19): ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವದ ಮೆರವಣಿಗೆಯಲ್ಲಿ ಗಂಗೊಳ್ಳಿಯ ಟೀಮ್ ವಿಶ್ವಸಾಗರ ಪ್ರದರ್ಶಿಸಿದ ಅಯೋಧ್ಯ ರಾಮ ಮಂದಿರದ ಟ್ಯಾಬ್ಲೋ ತನ್ನ ಸೌಂದರ್ಯದಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಧನುರ್ಧಾರಿ ರಾಮನ ಪ್ರತಿಕೃತಿ ಮತ್ತು ರಾಮ ಸ್ಮರಣೆಯ ಮೌಲಿಕ ನುಡಿಗಳ ಜೊತೆಯಲ್ಲಿಯೇ ಇತ್ತೀಚೆಗಷ್ಟೇ ನಿಧನರಾದ ಪ್ರಮಾಣಿಕತೆ ಮತ್ತು ಯಶಸ್ಸಿನ ಪ್ರೇರಕ ಶಕ್ತಿಯಾಗಿ ದೇಶದ ಅಭಿವೃದ್ಧಿಗೆ ಅಪಾರವಾದ ಮಹೋನ್ನತ ಕೊಡುಗೆಯನ್ನು ನೀಡಿದ ಅಪ್ರತಿಮ ದೇಶಪ್ರೇಮಿ ಶ್ರೀ ರತನ್ ಟಾಟಾ ಅವರ ಭಾವಚಿತ್ರವನ್ನು ಬಳಸಿಕೊಂಡು ಅಕ್ಷರ ರೂಪದ ನುಡಿ ನಮನಗಳನ್ನು ಸಲ್ಲಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.