ಕುಂದಾಪುರ (ಆ, 10): ಕುಂದಾಪುರದ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಬೈಂದೂರು ಮಾಜಿ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿಯವರ ಕೈಗಾರಿಕೆಗಳಾದ ಮುಳ್ಳುಗುಡ್ಡೆ ಸೌಪರ್ಣಿಕ ಹೆಂಚಿನ ಕಾರ್ಖಾನೆ, ಸೌಪರ್ಣಿಕ ಡೆಕೋರೇಟಿವ್ ಟೈಲ್ಸ್, ಸೌಪರ್ಣಿಕ ಗೇರುಬೀಜ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಪದವಿಪೂರ್ವ ಹಂತದಲ್ಲಿ ವಾಣಿಜ್ಯೇತರ ವಿಭಾಗಗಳಲ್ಲಿ ತೇರ್ಗಡೆಗೊಂಡು ಪ್ರಸ್ತುತ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸೇತುಬಂಧ/Bridge Course ತರಗತಿಗಳನ್ನು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹಮ್ಮಿಕೊಂಡಿದ್ದು. ವಿದ್ಯಾರ್ಥಿಗಳಿಗೆ ಕೈಗಾರಿಕೆ, ಉದ್ಯಮ, ವ್ಯಾಪಾರ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ನೀಡುವುದು ಮತ್ತು ಪ್ರಾಯೋಗಿಕವಾಗಿ ವಾಣಿಜ್ಯ ವಿಷಯಗಳನ್ನು ಅರ್ಥೈಸುವ ನಿಟ್ಟಿನಲ್ಲಿ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಖಾನೆಗೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆಯ ಮ್ಯಾನೇಜರಾದ ಶ್ರೀ ದಯಾನಂದ ಗಾಣಿಗ, ಅಕೌಂಟೆAಟ್ ಶ್ರೀ ಸತೀಶ್ ಅಡಿಗ ಇವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ರಾಜೇಶ್ ಶೆಟ್ಟಿ, ದೀಪಾ ಪೂಜಾರಿ, ಶ್ರೀ ಶರತ್ ಕುಮಾರ್, ಶ್ರೀ ಅಕ್ಷಯ್ ಕುಮಾರ್, ಶ್ರೀಮತಿ ಜೋಸ್ಲಿನ್ ಅಲ್ಮೇಡಾ, ಶ್ರೀಮತಿ ವಿನಯಾ ವಿ. ಶೆಟ್ಟಿ, ಶ್ವೇತಾ ಭಂಡಾರಿ, ಪೂಜಾ ಕುಂದರ್, ಶ್ರೀ ಸುಹಾಸ್ ಜಟ್ಟಿಮನೆ ಹಾಗೂ ನಿರ್ವಹಣಾ ವಿಭಾಗದ ಉಪನ್ಯಾಸಕಿ ಚೈತಾಲಿ ಉಪಸ್ಥಿತರಿದ್ದರು.