ಹೆಮ್ಮಾಡಿ (ನ17): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ), ಅಂಬಲಪಾಡಿ ಉಡುಪಿ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇವರ ಸಹಯೋಗದೊಂದಿಗೆ ನವೆಂಬರ್ 06 ರಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇದರ “ಮತ್ಸ ಜ್ಯೋತಿ” ಸಭಾಂಗಣದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇಲ್ಲಿನ ವೈದ್ಯಾಧಿಕಾರಿಗಳಿಂದ ಸಹಕಾರದಿಂದ ನಡೆದ ಸಾರ್ವಜನಿಕ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿ ವೈದ್ಯರ ಸಲಹೆಯ ಮೇರೆಗೆ ಉಚಿತ ಕನ್ನಡಕಕ್ಕೆ ಚೀಟಿಯನ್ನು ಪಡೆದವರು ನವೆಂಬರ್.18 ರ ಬೆಳಿಗ್ಗೆ ಸಮಯ 10 ರಿಂದ 12 ಗಂಟೆಯೊಳಗೆ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇದರ ಕಛೇರಿಯ ಸಂಕೀರ್ಣಕ್ಕೆ ಆಗಮಿಸಿ ಉಚಿತ ಕನ್ನಡಕ ವಿತರಣೆಯಲ್ಲಿ ಭಾಗವಹಿಸಿ ಕನ್ನಡಕವನ್ನು ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ವೈದ್ಯರು ನೀಡಿದ ಸಲಹಾ ಚೀಟಿಯನ್ನು ಕಡ್ಡಾಯವಾಗಿ ತೋರಿಸಿ ಉಚಿತ ಕನ್ನಡಕ ಪಡೆಯುವುದರೊಂದಿಗೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್ .ಕುಂದರ್ ಬಾಳಿಕೆರೆ ತಿಳಿಸಿದ್ದಾರೆ .