ಉಡುಪಿ (ಆ,17): ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರ್ವಾಜೆ ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಅಂಡರ್ 14 ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆರ್ಯನ್ ವಿ ಕೆ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಬೀದರ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.
ಇವನು ಉಪನ್ಯಾಸಕಿ ಸುಗುಣ ಆರ್ ಕೆ ಮತ್ತು ಪಶು ವೈದ್ಯಾಧಿಕಾರಿ ವಸಂತ್ ಕುಮಾರ್ ಇವರ ಪುತ್ರ. ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕ ಮತ್ತು ಶಿಕ್ಷಕರು ವೃಂದದವರು ಆರ್ಯನ್ ಸಾಧನೆಯನ್ನು ಅಭಿನಂದಿಸಿದ್ದಾರೆ.