ಹೆಮ್ಮಾಡಿ (ಸೆ. 05): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕ ದಂಪತಿಗಳಾದ ಪಡುಕೋಣೆ ಶ್ರೀ ಪಿ.ನರಸಿಂಹಮೂರ್ತಿ ಹಾಗೂ ಶ್ರೀಮತಿ ಜಯಂತಿ ಇವರನ್ನು ಘಟಕದ ವತಿಯಿಂದ ಅವರ ಸ್ವಗ್ರಹಕ್ಕೆ ತೆರಳಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸಾಹಿತಿ,ನಾಟಕಕಾರ, ಸಮಾಜ ಸೇವಕ ಪ್ರಗತಿಪರ ಕೃಷಿಕ ,ನಿವೃತ್ತ ಶಿಕ್ಷಕ ಶ್ರೀ ಪಿ ನರಸಿಂಹಮೂರ್ತಿ ಮಾತನಾಡಿ ಶಿಕ್ಷಕ ಕೇವಲ ಪಾಠ ಪ್ರವಚನಕ್ಕೆ ಮಾತ್ರ ಸೀಮಿತನಾಗದೆ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಹಾಗೂ ಸಮಾಜಕ್ಕೆ ಬೆಳಕಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಅವರ ಧರ್ಮಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಜಯಂತಿ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರವಾದದ್ದು, ವಿದ್ಯಾರ್ಥಿಗಳು ನಮಗೆ ತೋರುವ ಪ್ರೀತಿಯೇ ನಮಗೆ ಸಂಪತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ(ರಿ ), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ ಬಾಳಿಕೆರೆ, ಗೌರವಾಧ್ಯಕ್ಷರಾದ ಲೋಹಿತಾಶ್ವ ಆರ್ ಕುಂದರ್, ಕಾರ್ಯದರ್ಶಿ ಜಗದೀಶ್ ನೆಂಪು, ಕೋಶಾಧಿಕಾರಿ ವಿಜಯ ಕಾಂಚನ್ ಹಾಗೂ ಘಟಕದ ಪದಾಧಿಕಾರಿಗಳು, ಮೊಗವೀರ ಮಹಾಜನ ಸೇವಾ ಸಂಘ (ರಿ )ಬಗ್ವಾಡಿ ಹೋಬಳಿಯ ಕಾರ್ಯದರ್ಶಿ ಪ್ರಭಾಕರ್ ಸೇನಾಪುರ , ಉಪಾಧ್ಯಕ್ಷರಾದ ನಾಗೇಶ್ ಕಾಂಚನ್, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷರಾದ ಪ್ರವೀಣ್ ಮೊಗವಿರ ಗಂಗೊಳ್ಳಿ ನಿರೂಪಿಸಿ ವಂದಿಸಿದರು.