ಉಡುಪಿ: ಸ್ವಾಮಿ ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ರಕ್ತ ದಾನದ ಮಹತ್ವ ಹಾಗೂ ಸಾಮಾಜಿಕ ಜಾಗ್ರತಿ ಮೂಡಿಸುವ ಅಂತರ್ ಕಾಲೇಜು ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ರಕ್ತ ದಾನ ಶಿಬಿರವನ್ನು ಫೆಬ್ರವರಿ 4 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಸುಧೀರ್ ಚಂದ್ರ ಸೂಡ ಉದ್ಘಾಟಿಸಿದರು. ಮಿಲಾಗ್ರಿಸ್ ವಿದ್ಯಾಸಂಸ್ಥೆ ಕಲ್ಯಾಣಪುರ ಇದರ ಸಂಚಾಲಕರಾದ ಫಾದರ್ ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆಯನ್ನು ವಹಿಸಿ ಕಿರುಚಿತ್ರ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.
ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ ಡೆಸ್ ಮೆಂಡ್ ವಾಜ್, ಅಭಯ ಹಸ್ತ ಹೆಲ್ಪ್ ಲೈನ್ ಇದರ ಸಂಸ್ಥಾಪಕರಾದ ಶ್ರೀ ಸತೀಶ್ ಸಾಲ್ಯಾನ್, ಲಯನ್ಸ್ ಕ್ಲಬ್ ಕೋಸ್ಟ್ ಲ್ ಕುಂದಾಪುರ ಇದರ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಎಂ.ಐ.ಟಿ. ಮಣಿಪಾಲದ ಭದ್ರತಾ ಅಧಿಕಾರಿ ಶ್ರೀ ರತ್ನಾಕರ ಸಾಮಂತ, ಕೆ.ಎಮ್. ಸಿ. ಮಣಿಪಾಲದ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಶಮಿ ಶಾಸ್ತ್ರಿ, ಅಲುಮ್ನಿ ಸಂಘಟನೆಯ ಶ್ರೀ ಶೇಖರ ಗುಜ್ಜಾರಬೆಟ್ಟು ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಅನುಪಮ ಜೋಗಿ ಉಪಸ್ಥಿತರಿದ್ದರು. ಜಲ್ಲಾ ಎಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಅಂತರ್ ಕಾಲೇಜು ಕಿರುಚಿತ್ರ ಸ್ಪರ್ಧೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳು ರಕ್ತದಾನದ ಮಹತ್ವದ ಕುರಿತು ರಚಿಸಿದ ಕಿರುಚಿತ್ರ ಅನುಬಂಧ ಪ್ರಥಮ ಸ್ಥಾನ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ದ್ವೀತಿಯ ಹಾಗೂ ಮಿಲಾಗ್ರಿಸ್ ಕಾಲೇಜು ತ್ರತೀಯ ಸ್ಥಾನ ಪಡೆದುಕೊಂಡಿರುತ್ತದೆ.
ಕರ್ನಾಟಕ ರಾಜ್ಯ ಎಡ್ಸ್ ಪ್ರೀವೆನ್ಷನ್ ಸೊಸೈಟಿ ಬೆಂಗಳೂರು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಯುತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಎನ್. ಸಿ. ಸಿ., ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ, ಅಭಯ ಹಸ್ತ ಹೆಲ್ಪ್ ಲೈನ್, ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಕೋಸ್ಟ್ ಲ್ ಕುಂದಾಪುರ, ಅಲುಮ್ನಿ ಸಂಘಟನೆ (ರಿ) ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಹಾಗೂ ಬ್ಲಡ್ ಬ್ಯಾಂಕ್ ಕೆ.ಎಮ್.ಸಿ. ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.