ಉಡುಪಿ (ಮಾ.19): ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಇದರ 250ನೇ ರಕ್ತದಾನ ಶಿಬಿರ ಹೆಗ್ಗುರುತು – 250
ಏಪ್ರಿಲ್ 06 ರ ಆದಿತ್ಯವಾರದಂದು ಬೆಂಗಳೂರಿನಲ್ಲಿ ನಡೆಯಲಿದ್ದು ಇದರ ಪ್ರಯುಕ್ತ 250ನೇ ರಕ್ತದಾನ ಶಿಬಿರದ ಲಾಂಭನ ಬಿಡುಗಡೆ ಕಾರ್ಯಕ್ರಮ ಇದೇ ಮಾರ್ಚ್ 21ರಂದು ಶುಕ್ರವಾರ ಸಂಜೆ 5.00 ಗಂಟೆಗೆ ಮಣಿಪಾಲದ ಹೋಟೆಲ್ ಕೃಷ್ಣ ಕುಟೀರದಲ್ಲಿ ಜರುಗಲಿದೆ.

ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶ್ರೀ ಅಬೀದ್ ಗದ್ಯಾಳ ಇವರು ಉದ್ಘಾಟಿಸಲಿದ್ದು ಡಾ. ಬಾಲಕೃಷ್ಣ ಮದ್ದೋಡಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದು , ಅಭಯಹಸ್ತ ಹೆಗ್ಗುರುತು- 250 ರಕ್ತದಾನ ಶಿಬಿರದ ಲಾಂಛನವನ್ನು ಜಿಲ್ಲಾ ಪಂಚಾಯತ್ ಉಡುಪಿ ಇದರ ಮುಖ್ಯ ಕಾರ್ಯನಿರ್ವಾಹಕ ಭಾ.ಅ.ಸೇ,ಅಧಿಕಾರಿ ಶ್ರೀ ಪ್ರತೀಕ್ ಬಾಯಲ್ ಇವರು ಬಿಡುಗಡೆಗೊಳಿಸಲಿದ್ದಾರೆ.

ಅಭಯಹಸ್ತ ನಡೆದು ಬಂದ ದಾರಿ ವರದಿಯನ್ನು ಮಾಹೆ ಮಣಿಪಾಲದ ಸಿಇಓ ಡಾ.ರವಿರಾಜ್ ನೀಲಾವರ್ ಬಿಡುಗಡೆಗೊಳಿಸಲಿದ್ದಾರೆ.
ಅಭಯಹಸ್ತ ನವೀಕೃತ ಲಾಂಛನವನ್ಮು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ. ಜಿ.ಶಂಕರ್ ಬಿಡುಗೊಳಿಸಲಿದ್ದಾರೆ.

ಆದರ್ಶ ಆಸ್ಪತ್ರೆ ಉಡುಪಿ ವೈದ್ಯಕೀಯ ನಿರ್ದೇಶಕರಾದ ಡಾ. ಚಂದ್ರಶೇಖರ ಜಿ.ಎಸ್ ಇವರು ಗೌರವ ಉಪಸ್ಥಿತ್ತರಿದ್ದು
ಮುಖ್ಯ ಅತಿಥಿಯಾಗಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಪೂಜಾರಿ, ದ.ಕ ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇದರ
ಅಧ್ಯಕ್ಷರಾದ ಶ್ರೀ ಜಯ ಸಿ ಕೋಟ್ಯಾನ್, ಸಮಾಜಸೇವಕರಾದ ಶ್ರೀ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ,ಮಲ್ಪೆ ಮೀನುಗಾರ ಸಂಘ ರಿ. ಮಲ್ಪೆ ಇದರ ಅಧ್ಯಕ್ಷರಾದ ಶ್ರೀ ದಯಾನಂದ ಸುವರ್ಣ, ಅಭಯಹಸ್ತ 250ನೇ ರಕ್ತದಾನ ಸಮಿತಿ ಬೆಂಗಳೂರು ಇದರ ಕಾರ್ಯಾಧ್ಯಕ್ಷರಾದ
ಶ್ರೀ ಉಮೇಶ್ ಕುಂದರ್ ಮಂದಾರ್ತಿ,ಸಮಾಜಸೇವಕರಾದ ಶ್ರೀಮತಿ ನಿರುಪಮಾ ಪ್ರಸಾದ್ ,ಮಾತೃಶ್ರೀ ಸೇವಾ ಸಂಘ ಮಣಿಪಾಲ ಇದರ ಪ್ರವರ್ತಕರಾದ ಡಾ.ಬಳ್ಕೂರು ಗೋಪಾಲ ಆಚಾರ್ಯ, ಹೋಟೆಲ್ ಕೃಷ್ಣ ಕುಟೀರ ಮಣಿಪಾಲ ಇದರ ಶ್ರೀ ರಾಘವೇಂದ್ರ ಸುವರ್ಣ ಮಲ್ಪೆ
ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಸದಸ್ಯರಾದ ಶ್ರೀ ರಾಜೇಶ್ ಮೆಂಡನ್,ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಶ್ರೀ ರಾಜೇಶ್ ಶೆಟ್ಟಿ ಮುನಿಯಾಲು, ಶ್ರೀ ಶರತ್ ಕಾಂಚನ್ ಆನಗಳ್ಳಿ.ಶ್ರೀ ರಾಘವೇಂದ್ರ ಕಾಂಚನ್ ಮರವಂತೆ ( ಸಂಚಾಲಕರು, ಅಭಯಹಸ್ತ ಬೆಂಗಳೂರು) ಶ್ರೀ ಪ್ರವೀಣ್ ಶ್ರೀಯಾನ್ (ಬೆಂಗಳೂರು) ಇವರು ಈ ಸಂದರ್ಭದಲ್ಲಿ ಉಪಸ್ಥಿತ್ತರಿರುವ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













