ಕುಂದಾಪುರ (ಆ, 03): ಪಿ.ಎಸ್.ಎಸ್.ಇ.ಎಂ.ಆರ್ ಶಾಲೆ ಮತ್ತು ಪಿಯು ಕಾಲೇಜು ದಾವಣಗೆರೆ ಆಯೋಜಿಸಿದ
ಸಿ ಬಿ ಎಸ್. ಸಿ ಕ್ಲಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರದ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಯಾದ ಕುಂದಾಪುರ ಟ್ರ್ಯಾಕ್ & ಫೀಲ್ಡ್ನ ಅಥ್ಲೀಟ್ ಆಶಿತ್ ಸಂಜಯ್ ಕುಮಾರ್ ಬಾಲಕರ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಪಡೆದು ಸಿ. ಬಿ. ಎಸ್. ಸಿ ರಾಷ್ಟ್ರೀಯ ಚಾಂಪಿಯನ್ಶಿಪ್ – 2024 ಗೆ ಅರ್ಹತೆ ಪಡೆದಿದ್ದಾರೆ.
ಇವರಿಗೆ ಕುಂದಾಪುರ ಟ್ರ್ಯಾಕ್ & ಫೀಲ್ಡ್ನ ಮುಖ್ಯಸ್ಥರು ಹಾಗೂ ತರಬೇತುದಾರರಾದ ಶ್ರೀ ಪ್ರಶಾಂತ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.