ಕುಂದಾಪುರ( ಆ,05): ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಬೀಜಾಡಿಯ ಸೀತಾಲಕ್ಮಿ ಮತ್ತು ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆ ಇಲ್ಲಿ ಅಕ್ಟೋಬರ್ ,01 ರಂದು ಉದ್ಘಾಟನೆ ಗೊಂಡಿತು.
ರಾಷ್ಟೀಯ ಮಾನವ ಹಕ್ಕುಗಳ ಸಮಿತಿ ಯ ಜನರಲ್ ಸೆಕ್ರೆಟರಿ ಶ್ರೀ ದಿನೇಶ್ ಗಾಣಿಗ ರವರು ಶಿಬಿರ ಉದ್ಘಾಟಿಸಿದರು.ಶ್ರೀ ಲಕ್ಷ್ಮಣ ಟಿ.ನಾಯಕ್ ಅಧ್ಯಕ್ಷರು.ಶಾಲಾಭಿವೃದ್ದಿ ಸಮಿತಿ, ಶ್ರೀ ಶೇಷಗಿರಿ ಗೋಟ, ಗೌರವ ಅಧ್ಯಕ್ಷರು ಶಾಲಾ ಹಿತ ರಕ್ಷಣಾ ಸಮಿತಿ.ಶ್ರೀ ದಿನಕರ ಶೆಟ್ಟಿ ಮಾಲೀಕರು ನ್ಯೂ ಮೆಡಿಕಲ್.ಬಾಬಣ್ಣ ಪೂಜಾರಿ ನಿವೃತ್ತ ಮೆಸ್ಕಾಂ ಅಧಿಕಾರಿ. ಶ್ರೀ ಕಾರ್ತಿಕ್ ಕುಂದರ್ ಮ್ಯಾನೇಜಿಂಗ್ ಡ್ಯೆರೆಕ್ಟರ್ ನ್ಯೂಸ್ 224. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿನೋದ ಎಮ್.ಹಿರಿಯ ಉಪನ್ಯಾಸಕರಾದ ಶ್ರೀ ಚಂದ್ರಶೇಖರ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲ ಶ್ರೀ ರಾಮಕೃಷ್ಣ ಬಿ ಜಿ ಅಧ್ಯಕ್ಷತೆ ವಹಿಸಿದ್ದರು. ಘಟಕದ ಶಿಬಿರಾಧಿಕಾರಿಗಳಾದ ಶ್ರೀಮತಿ ವನಿತಾ ನಾಯ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಶ್ರೀ ಉದಯ ಶೆಟ್ಟಿ ಉಪನ್ಯಾಸಕರು ನಿರೂಪಿಸಿದರು.