ಕುಂದಾಪುರ (ಅ.10): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘ ಹಾಗೂ ಹಿಂದಿ ಸಂಘದ ಜಂಟಿ ಆಶ್ರಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ‘ದಾಂಡಿಯ 2024’ ವಿಶೇಷವಾಗಿ ಜರುಗಿತು. ಕಾಲೇಜಿನ ಸಾಂಸ್ಕೃತಿಕ ತಂಡದಿಂದ ದಾಂಡಿಯ ನೃತ್ಯ ಪ್ರಕಾರವನ್ನು ಕಾಲೇಜಿನ ಪ್ರಾಂಗಣದಲ್ಲಿ ನೆರವೇರಿಸಲಾಯಿತು.
ವಿದ್ಯಾರ್ಥಿಗಳಿಗೆ ನಮ್ಮ ಕಲೆ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆ ಜೊತೆಗೆ ಭವಿಷ್ಯದಲ್ಲಿ ಇಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದರ ಬಗ್ಗೆ ತಿಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಲಲಿತ ಕಲಾ ಸಂಘದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ರವೀನಾ ಸಿ. ಪೂಜಾರಿ, ನಿರ್ಮಲ ಬಿಲ್ಲವ ಹಾಗೂ ಹಿಂದಿ ಸಂಘದ ಸಂಯೋಜಕರಾದ ಡಾ| ದೀಪಾ ಮತ್ತು ಶ್ರೀಮತಿ ರೇವತಿ ಡಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೃದ್ಧಿ ಕಿಣಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.