ಕುಂದಾಪುರ( ಆ,13): ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ವೈಬ್ ಸೈಟ್ ಅನಾವರಣ ಕಾರ್ಯಕ್ರಮ ಕುಂದಾಪುರದ ಸಾಯಿ ಸೆಂಟರ್ ಬಿಲ್ಡಿಂಗ್ ನಲ್ಲಿ ಅಕ್ಟೋಬರ್, 11 ರಂದು ಅನಾವರಣಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಆಡಳಿತ ಮೊಕ್ತೇಸರರು ಹಾಗೂ ಮಾಜಿ ಶಾಸಕರಾದ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಉಡುಪಿ ಜಿಲ್ಲೆಯ ಪರಿಸರ ಇದೊಂದು ವಿನೂತನ ಪ್ರಯೋಗ ಈಗಿನ ಕಾಲಕ್ಕೆ ತಕ್ಕಂತೆ ಹೊಸ ಆಲೋಚನೆಗಳ ಮೂಲಕ ಭಾಮಾ ಅಸೋಸಿಯೇಟ್ಸ್ ತನ್ನ ಸಂಸ್ಥೆಯ ಜೊತೆ ವೈಬ್ ಸೈಟ್ ಕೂಡ ಅನಾವರಣ ಮಾಡಿದ್ದಾರೆ ಸಂಸ್ಥೆಯೂ ಗ್ರಾಮೀಣ ಮಟ್ಟದಲ್ಲಿ ಒಳ್ಳೆಯ ಸೇವೆ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಪಸರಿಸಲಿ ಎಂದು ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಕೊಡವೂರು ವಾರ್ಡ್ ನ ಪ್ರಭಾವಿ ನಗರ ಸಭೆ ಸದಸ್ಯರು ವಿಜಯ ಕೊಡವೂರು ಮಾತನಾಡಿ ಈ ಸಂಸ್ಥೆಯ ಕನಸು ಹೊತ್ತ ಆತ್ಮೀಯ ಮಿತ್ರ ಆಕಾಶ್ ಶೆಟ್ಟಿ ಅಂಪಾರು ಅವರ ಆಲೋಚನೆ ಹೊಸ ಭರವಸೆ ಮೂಡಿಸಿದೆ ಇದರ ಜೊತೆಗೆ ನನ್ನ ಮಿತ್ರ ಉಡುಪಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಇರುವ ದಿವ್ಯಾಂಗರ ಸೇವೆಗೆ ಸಾಮಾಜಿಕವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಸೇವೆ ಇನ್ನಷ್ಟು ಹೆಚ್ಚಾಗಲಿ ಶುಭ ಹಾರೈಸಿದರು.
ನಿವೃತ್ತ ಶಿಕ್ಷಕರು, ಲಯ್ಸನ್ ಕ್ಲಬ್ ಕುಂದಾಪುರ ಕಾರ್ಯದರ್ಶಿ ಶ್ರೀ ದಿನಕರ ಆರ್ ಶೆಟ್ಟಿ ಶುಭ ಹಾರೈಸಿದರು. ಇದರ ಜೊತೆಗೆ ಗುರುವಂದನಾ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯಿಂದ ಶ್ರೀ ರತ್ನಾಕರ ಶೆಟ್ಟಿ ಅಂಪಾರು, ಶ್ರೀ ದಿನಕರ ಆರ್ ಶೆಟ್ಟಿ ಬಸ್ರೂರು, ಶ್ರೀ ಸುಭಾಶ್ಚಂದ್ರ ಶೆಟ್ಟಿ ಅಂಪಾರು, ಶ್ರೀ ಶಶಿಧರ ಶೆಟ್ಟಿ ನೂಜೆಟ್ಟು, ಶ್ರೀ ಪ್ರಶಾಂತ ಹೆಗ್ಡೆ ಜಾಂಬೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಆಕಾಶ್ ಶೆಟ್ಟಿ ಅಂಪಾರು, ಭಾಮಾ ಅಸೋಸಿಯೇಟ್ಸ್ ವೈಬ್ ಸೈಟ್ ವಿನ್ಯಾಸಕಾರ ಸಂದೀಪ್ ಕೊಠಾರಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜ್ಯ ಮಟ್ಟದ ನಿರೂಪಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿ ನಿರೂಪಿಸಿದರು, ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಆಕಾಶ್ ಶೆಟ್ಟಿ ಅಂಪಾರು ವಂದಿಸಿದರು.