ಕುಂದಾಪುರ(ಫೆ. 04): ಇಲ್ಲಿನ ಕಂಡ್ಲೂರು ಜಿಯಾ ಪಬ್ಲಿಕ್ ಇಂಗ್ಲಿಷ್ ಮಧ್ಯಮ ಶಾಲೆಯ ಯುವ ಕರಾಟೆ ಪಟು ಮೊಹಮ್ಮದ್ ಸಫಾನ್ ಕರಾಟೆಯಲ್ಲಿ ಗಮನಾರ್ಹ ಸಾಧನೆಗೈದು ಜುಲೈನಲ್ಲಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಕರಾಟೆ ಗುರುಗಳಾದ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿಕೆ, ಮತ್ತು ಸಿಹಾನ್ ಶೇಖ್ ಬಸ್ರೂರ್ ರವರ ಮಾರ್ಗದರ್ಶನದಲ್ಲಿ ಈತ ತರಬೇತಿ ಪಡೆದಿದ್ದಾನೆ.ಈತ ಶೇಕ್ ಸಯ್ಯದ್ ಮಕ್ಬೂಲ್ ಮತ್ತು ಬಿಸ್ಮಿಲ್ಲಾ ಯಾಸ್ಮಿನ್ ರವರ […]
Tag: geneal news
ಫೆ.01 ರಿಂದ ಕಲರ್ಸ್ ಕನ್ನಡದಲ್ಲಿ ‘ಬಾಯ್ಸ್ v/s ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಶೋಗಳು
ಮಂಗಳೂರು(ಫೆ,1 ): ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಪ್ರಾರಂಭಿಸುತ್ತಿದೆ. ‘ಬಾಯ್ಸ್ v/s ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ .1ರಿಂದ ಪ್ರಸಾರ ಆರಂಭಿಸಲಿವೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಹಾಗೂ ರಾತ್ರಿ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಕಲರ್ಸ್ […]
ನಾಗರಿಕ ಸಮಾಜದ ಪ್ರೀತ್ಯಾದರಗಳಿಂದ ಸೈನಿಕರ ಮನೋಬಲ ಹೆಚ್ಚುತ್ತದೆ- ಬೈಂದೂರು ಚಂದ್ರಶೇಖರ ನಾವಡ
ಕುಂದಾಪುರ (ಜ.29): ದೇಶದ ಗಡಿಯಲ್ಲಿ ಎದುರಿನಿಂದ ಶತ್ರುಗಳು, ಆಂತರಿಕವಾಗಿ ಉಗ್ರವಾದಿಗಳ ಜತೆ ಜತೆಯಲ್ಲಿ ಹವಾಮಾನ ವೈಪರೀತ್ಯದ ಕಠಿಣ ಸವಾಲನ್ನು ಎದುರಿಸುವ ಸೈನಿಕರಿಗೆ ನಾಗರಿಕ ಸಮಾಜದ ಆದರ ಮನೋಬಲ ಹೆಚ್ಚಿಸುತ್ತದೆ. ಸರ್ಕಾರದ ಬೆನ್ನೆಲುಬಾಗಿ ನಿಂತಿರುವ ಭಾರತೀಯ ಸೇನೆಯಿಂದಾಗಿ ಸಾಮಾನ್ಯ ನಾಗರಿಕರ ಬದುಕು ನೆಮ್ಮದಿಯುತವಾಗಿದೆ ಮತ್ತು ನಮ್ಮ ಗಣತಂತ್ರ ಯಶಸ್ವಿ ಎನಿಸಿದೆ ಎಂದು ಲೇಖಕ,ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡ ಅಭಿಪ್ರಾಯ ಪಟ್ಟರು. ಅವರು ಬೈಂದೂರು ತಾಲೂಕು ಶಿರೂರಿನ ಜೋಗೂರು ಗ್ರಾಮದಲ್ಲಿ ಸಮರ […]
ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆ: ಗಂಗೊಳ್ಳಿಯ ನಮ್ರತಾ .ಎಸ್ ಪೂಜಾರಿ ತ್ರತಿಯ ಸ್ಥಾನ
ಗಂಗೊಳ್ಳಿ( ಜ.15): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೇಷನ್ ಹಾಲ್ ನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್ ನ ನಮ್ರತಾ ಎಸ್ ಪೂಜಾರಿ ತ್ರತಿಯ ಸ್ಥಾನ ಪಡೆದಿದ್ದಾರೆ. ಇವರು ಗಂಗೊಳ್ಳಿಯ ಶ್ರೀಮತಿ ಜ್ಯೋತಿ ಮತ್ತು ಸುರೇಶ್ ಪೂಜಾರಿ ದಂಪತಿಯ ಪುತ್ರಿ. ಗುಜ್ಜಾಡಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ 3 ನೇ ತರಗತಿಯ ವಿದ್ಯಾರ್ಥಿನಿ . ಇವರಿಗೆ ಶಿಕ್ಷಕರಾದ […]
ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆ: ಶ್ರದ್ಧಾ. ಎಸ್ ದ್ವಿತೀಯ ಸ್ಥಾನ
ಕುಂದಾಪುರ ( ಜ,14): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವಿಟ್ ಲಿಮಿಟೆಡ್ ಕಂಪನಿ ಬೆಂಗಳೂರಿನಲ್ಲಿ ಜನವರಿ 12ರಂದು ಆಯೋಜಿಸಿದ್ದ 20 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯ ನಾಲ್ಕನೇ ವಿಭಾಗದಲ್ಲಿ ಶ್ರದ್ಧಾ.ಎಸ್ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಇಕೆ ಶ್ರೀಮತಿ ಚಂದ್ರಿಕಾ ಹಾಗೂ ಶ್ರೀ ಸತೀಶ್. ಬಿ. ದಂಪತಿಯ ಪುತ್ರಿ ಹಾಗೂ ತೆಕ್ಕಟ್ಟೆಯ ವಿಶ್ವ ವಿನಾಯಕ ನ್ಯಾಷನಲ್ ಸ್ಕೂಲ್ ನ 6ನೇ ತರಗತಿಯ ವಿದ್ಯಾರ್ಥಿ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ: ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದ ನಿರ್ದೇಶಕರ ಚುನಾವಣೆಯಲ್ಲಿ ಶೇಖರ ಪೂಜಾರಿಯವರಿಗೆ ಗೆಲುವು
ಕುಂದಾಪುರ ( ಆ,30): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ( ರಿ.), ಬೆಂಗಳೂರು, ತಾಲೂಕು ಶಾಖೆ ಕುಂದಾಪುರ ಇದರ ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದಿಂದ ನಿರ್ದೇಶಕರ ಚುನಾವಣೆ (2024 2029 ರ ಅವಧಿ) ಅಕ್ಟೋಬರ್ 28 ರಂದು ನಡೆಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಸರಕಾರಿ ಪ್ರೌಢ ಶಾಲೆ ಬಸ್ರೂರು ಇದರ ಸಹ ಶಿಕ್ಷಕರಾದ ಶ್ರೀ ಶೇಖರ ಪೂಜಾರಿಯವರು ಅತ್ಯಧಿಕ ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿರುತ್ತಾರೆ.
ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ವೈಬ್ ಸೈಟ್ ಅನಾವರಣ
ಕುಂದಾಪುರ( ಆ,13): ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ವೈಬ್ ಸೈಟ್ ಅನಾವರಣ ಕಾರ್ಯಕ್ರಮ ಕುಂದಾಪುರದ ಸಾಯಿ ಸೆಂಟರ್ ಬಿಲ್ಡಿಂಗ್ ನಲ್ಲಿ ಅಕ್ಟೋಬರ್, 11 ರಂದು ಅನಾವರಣಗೊಂಡಿತು. ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಆಡಳಿತ ಮೊಕ್ತೇಸರರು ಹಾಗೂ ಮಾಜಿ ಶಾಸಕರಾದ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಉಡುಪಿ ಜಿಲ್ಲೆಯ ಪರಿಸರ ಇದೊಂದು ವಿನೂತನ ಪ್ರಯೋಗ ಈಗಿನ ಕಾಲಕ್ಕೆ ತಕ್ಕಂತೆ ಹೊಸ ಆಲೋಚನೆಗಳ ಮೂಲಕ ಭಾಮಾ […]
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ದೀಕ್ಷಿತ್ ಗೆ ಸನ್ಮಾನ
ಕುಂದಾಪುರ (ಮೇ 17): ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ದೀಕ್ಷಿತ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ಹಿನ್ನೆಲೆಯಲ್ಲಿ ಕುಂದಾಪುರದ ಸಹಾಯಕ ಕಮಿಷನರ್ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿ ಎಸ್. ಆರ್. ರಶ್ರೀ ರವರು ಸನ್ಮಾನಿಸಿ ಶುಭಹಾರೈಸಿದರು. ದೀಕ್ಷಿತ್ ಮುಂದಿನ ದಿನಗಳಲ್ಲೂ ಉತ್ತಮ ಸಾಧನೆಗೈದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.