ಕಿರಿಮಂಜೇಶ್ವರ( ಆ,30): ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲಾ ಕ್ರೀಡಾಂಗಣ ಮಾವಿನಕಟ್ಟೆಯಲ್ಲಿ ನಡೆಯಿತು.
ಈ ಕ್ರೀಡಾಕೂಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ- 14ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಪ್ರವೀಶ್ (8ನೇ ತರಗತಿ) ಪ್ರಥಮ ಸ್ಥಾನ ಹಾಗೂ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ(7ನೆ ತರಗತಿ) ದ್ವಿತೀಯ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
14ರ ವಯೋಮಾನದ ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ ಪ್ರವೀಶ್( 8ನೇ ತರಗತಿ ) ದ್ವಿತೀಯ ಸ್ಥಾನ ಹಾಗೂ ಪ್ರಾಥಮಿಕ ಬಾಲಕರ ಉದ್ದಜಿಗಿತ ವಿಭಾಗದಲ್ಲಿ ಅಬ್ದುಲ್ ಶೈಯನ್ ( 7ನೇ ತರಗತಿ) ತೃತೀಯ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ಸೋಹನ್ (7ನೇ ತರಗತಿ) ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ , ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.