ಉಡುಪಿ: ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ 2020 -21ನೇ ಸಾಲಿನ ವಾರ್ಷಿಕ ಮಹಾಸಭೆ ಯುವ ಸಂಘಟನೆಯ ಮಹಾಪೋಷಕರು ಹಾಗೂ ಮಾರ್ಗದರ್ಶಕರಾದ ನಾಡೋಜಾ ಡಾ. ಜಿ. ಶಂಕರ್ ರವರ ಉಪಸ್ಥಿತಿಯಲ್ಲಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಫೆಬ್ರವರಿ 7 ರಂದು ನಡೆಯಿತು.
ಯುವ ಸಂಘಟನೆಯ ಅಧ್ಯಕ್ಷರಾದ ಶಿವರಾಮ್ .ಕೆ.ಎಮ್ .ಕೋಟ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮುಂದಿನ ದಿನಗಳಲ್ಲಿ ಸಂಘಟನೆ ಕೈಗೊಳ್ಳ ಬೇಕಾದ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ವಿವರಿಸಿದರು.ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸುವರ್ಣ ಹಿರಿಯಡ್ಕ 2020 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಪಾಂಡುರಂಗ ಬೈಂದೂರು 2019-20 ನೇ ಸಾಲಿನ ಲೆಕ್ಕ ಪರಿಶೋಧಕರ ವರದಿಯನ್ನು ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷರಾದ ವಿನಯ ಕರ್ಕೇರಾ ಸ್ವಾಗತಿಸಿದರು. ರಾಜೇಂದ್ರ ಸುವರ್ಣ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಶೋಕ ತೆಕ್ಕಟ್ಟೆ ನಿರೂಪಿಸಿದರು. ಯುವ ಸಂಘಟನೆಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಘಟಕಗಳ ಆಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಕರೋನಾ ವಾರಿಯರ್ಸ್ಗಳಾಗಿ ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸಿದ ಯುವ ಸಂಘಟನೆಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು.