ಕಾರ್ಕಳ ( ನ.01): ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ ಪ್ರತಿಯೊಂದು ಮಗುವೂ ವಿಜ್ಞಾನಿ, ಪ್ರಕೃತಿಯಿಂದ ಕಲಿತಷ್ಟು ಪುಸ್ತಕದಿಂದ ಕಲಿಯಲು ಸಾಧ್ಯವಿಲ್ಲ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಮಾಡಿಸಿ ತೋರಿಸಬೇಕೆಂದರು. ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ವಾಣಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ನಾಯಕ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಷಾ ರಾವ್ ಯು, ಡೀನ್ ಸ್ಟುಡೆಂಟ್ಸ್ ಅಫೇರ್ ಶಕುಂತಳಾ ಎಂ. ಸುವರ್ಣ, ಅಕಾಡೆಮಿಕ್ ಸಲಹೆಗಾರರಾದ ಶಾರದಾ ಅಂಬರೀಷ್, ಕಾರ್ಕಳದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ವಿಜಯನಾರಾಯಣ ನಾಯಕ್ ಉಪಸ್ಥಿತರಿದ್ದರು.
ವೈಯಕ್ತಿಕ ವಿಭಾಗದಲ್ಲಿ ಪೆರ್ವಾಜೆ ಸುಂದರ ಪುರಾಣಿಕ್ ಪ್ರೌಢಶಾಲೆಯ ಮನ್ವಿತ್ ಪ್ರಥಮ, ಹಿರಿಯಂಗಡಿ ಎಸ್.ಎನ್.ವಿ. ಪ್ರೌಢಶಾಲೆಯ ಸೃಜನ್ ಬಂಗೇರ ದ್ವಿತೀಯ, ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ತೃತೀಯ ಬಹುಮಾನವನ್ನು ಗಳಿಸಿದರು.
ಗುಂಪು ವಿಭಾಗದಲ್ಲಿ ಸಾಣೂರು ಪದವಿ ಪೂರ್ವ ಕಾಲೇಜಿನ ಪ್ರಶಾಂತ್ ಮತ್ತು ಅವಿತ್ ಪ್ರಥಮ, ಕ್ರೆöÊಸ್ಟ್ ಕಿಂಗ್ ಪ್ರೌಢಶಾಲೆಯ ಲೆನಿಶಾ ಮತ್ತು ಜುಬೇದಾ ದ್ವಿತೀಯ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವರ್ಷಾ ಆರ್. ಎಸ್. ಮತ್ತು ದೃತಿ ಎಸ್. ನಾಯಕ್ ತೃತೀಯ ಬಹುಮಾನವನ್ನು ಗಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾದ ಕು. ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.