ಕುಂದಾಪುರ(ನ.11) : ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ನವೆಂಬರ್ 9 ಶನಿವಾರದಂದು ಮಕ್ಕಳ ದಿನಾಚರಣೆಯ ಅಂಗವಾಗಿ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವವನ್ನು ಪ್ರೇರೇಪಿಸುವ ದೃಷ್ಠಿಯಿಂದ ಎಲ್ ಕೆ ಜಿ ಯಿಂದ 10ನೇ ತರಗತಿಯ ವರೆಗಿನ ಮಕ್ಕಳಿಂದ ಸ್ಪೆಕ್ಟ್ರಮ್ 2024 ವಸ್ತು ಪ್ರದರ್ಶನ ಜರುಗಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಸಂಸ್ಥೆಯ ಸಂಚಾಲಕರೂ ಆಗಿರುವ ಬಿ. ಎಮ್. ಸುಕುಮಾರ ಶೆಟ್ಟಿಯವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ, ಕಲೆ, ಕರಕುಶಲ ಸಾಮಗ್ರಿಗಳು, ಸಮಾಜ ಮತ್ತು ಭಾಷೆಗೆ ಸಂಬಂಧಿಸಿದ ಅನೇಕ ವಿಭಿನ್ನ ಮತ್ತು ವಿಶೇಷತೆಗಳಿಂದ ಕೂಡಿರುವ, ಅನೇಕ ಮಾದರಿಗಳನ್ನು ಪ್ರದರ್ಶಿಸಿದರು.
ಎಲ್ಲಾ ಪೋಷಕರು ಮತ್ತು ಸಾರ್ವಜನಿಕರು ಆಗಮಿಸಿ ವೀಕ್ಷಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವಿ.ಕೆ.ಆರ್ ಪ್ರೌಢ ಶಾಲಾ ಶಿಕ್ಷಕಿಯರಾದ ಸ್ಮಿತಾ. ಎಸ್. ಪಾಟೀಲ್ ಮತ್ತು ಶೃತಿ. ಆರ್. ನಾಯಕ್ ರವರ ನೇತೃತ್ವದಲ್ಲಿ, ವಿಜ್ಞಾನ ಶಿಕ್ಷಕರು ಮತ್ತು ಇನ್ನಿತರ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬಂದಿರುವುದರೊಂದಿಗೆ ಪೋಷಕರ ಪ್ರಶಂಸೆಗೆ ಕಾರಣವಾಯಿತು.