ಕುಂದಾಪುರ (ಡಿ.09): ಸಂಸ್ಥೆಯ ಬೆಳವಣಿಗೆಗೆ ವಿದ್ಯಾರ್ಥಿಗಳಷ್ಟೇ ಸಿಬ್ಬಂದಿ ವರ್ಗದವರೂ ಮುಖ್ಯ. ಸಿಬ್ಬಂದಿ ಸಂಘದ ಮುಖೇನ ನಾವೆಲ್ಲರೂ ಸಮಾನ ಮನಸ್ಕರಾಗಿ ದುಡಿದಾಗ ಸಂಸ್ಥೆಯ ಯಶಸ್ಸು ಸಾಧ್ಯ ಎಂದು ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ವಾರ್ಷಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸಿಬ್ಬಂದಿ ಸಂಘದ ಕಾರ್ಯದರ್ಶಿ, ಕಾರ್ಯಕ್ರಮದ ಸಂಯೋಜಕ ಶ್ರೀ ಮಹೇಶ್ ನಾಯ್ಕ್ ವಾರ್ಷಿಕ ಆಯ-ವ್ಯಯ ಪಟ್ಟಿ ವಾಚಿಸಿ, ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಂದಾ ರೈ ಅನಿಸಿಕೆ ಹಂಚಿಕೊAಡರು.
ಈ ಸಂದರ್ಭ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ, ನಿರ್ಗಮಿಸಿದ 7 ಬೋಧಕ-ಬೋಧಕೇತರರಿಗೆ ಸನ್ಮಾನಿಸಲಾಯಿತು. ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕಿ ನಿರ್ಮಲಾ ಪ್ರಾರ್ಥಿಸಿ, ವಾಣಿಜ್ಯ ಉಪನ್ಯಾಸಕ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ನಿರೂಪಿಸಿದರು.