ಕುಂದಾಪುರ (ನ.20): ಇತ್ತೀಚೆಗೆ ಮುರುಡೇಶ್ವರದಲ್ಲಿ ನಡೆದ ಬೀಚ್ ಮ್ಯಾರಥಾನ್ ನಲ್ಲಿ ಕುಂದಾಪುರದ ಪ್ರಸಿದ್ದ ಅಥ್ಲೆಟಿಕ್ ಸಂಸ್ಥೆಯಾದ ಕುಂದಾಪುರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ನಾಲ್ಕು ಪದಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.
16 ವರ್ಷದ ಕೆಳ ವಯಸ್ಸಿನಹುಡುಗಿಯರ ವಿಭಾಗದ 5 ಕಿ.ಲೋ ಮೀಟರ್ ಓಟದಲ್ಲಿ ನವ್ಯ ಆಚಾರ್ (ಓಕ್ ವುಡ್ ಇಂಡಿಯನ್ ಸ್ಕೂಲ್) ಚಿನ್ನದ ಪದಕ ಪಡೆದರೆ, ಅಕ್ಷತಾ ಜಿ.ಪೈ( ಓಕ್ ವುಡ್ ಇಂಡಿಯನ್ ಸ್ಕೂಲ್) ಬೆಳ್ಳಿ ಪದಕ ಪಡೆದಿದ್ದಾರೆ.
ಮನಸ್ವಿ( ಸೈಂಟ್ ಪಿಯುಸ್ ಸ್ಕೂಲ್ ಹಂಗ್ಳೂರು ) ಕಂಚಿನ ಪದಕ ಪಡೆದಿದ್ದು ,16 ವರ್ಷದ ಕೆಳ ವಯಸ್ಸಿನ ವಿಭಾಗದ ಹುಡುಗರ ವಿಭಾಗದಲ್ಲಿ
ಶ್ರೀಶ ಬಾಳಿಗಾ -(ಶ್ರೀ ಸಿದ್ದಿವಿನಾಯಕ ಶಾಲೆ ಹಟ್ಟಿಯಂಗಡಿ) ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾರೆ. ಇವರಿಗೆ ಕುಂದಾಪುರದ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ಪ್ರಶಾಂತ ಶೆಟ್ಟಿ ಯವರು ತರಬೇತಿ ನೀಡಿರುತ್ತಾರೆ.