ಕುಂದಾಪುರ.(ಡಿ.19: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರ ತಾಲೂಕಿನ ಹಳ್ಳಾಡಿ ಗ್ರಾಮದ ಜಯರಾಮ ಶೆಟ್ಟಿ, ಮುದೂರಿನ ಶಿವರಾಮ ಶೆಟ್ಟಿ, ಚಿತ್ತೂರಿನ ಪ್ರತೀಕ್ಷ ಶೆಟ್ಟಿ, ಹೊಂಬಾಡಿಯ ಶ್ರೀಮತಿ ಶಿಲ್ಪ ಶೆಟ್ಟಿ, ವಾಲ್ತೂರಿನ ಗೋವಿಂದ, ಸಿದ್ದಾಪುರದ ಶ್ರೀಶಾಂತರವರಿಗೆ ಆರೋಗ್ಯ ಭಾಗ್ಯ ಯೋಜನೆಯಡಿ 80000 ರೂಪಾಯಿ ಆರ್ಥಿಕ ನೆರವನ್ನು ಸಂಘದ ವತಿಯಿಂದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಸಂಘದ ಆಡಳಿತ ಕಚೇರಿಯಲ್ಲಿ ಡಿಸೆಂಬರ್ 19 ರಂದು ವಿತರಿಸಿದರು.
ಶ್ರೀ ನಿತೀಶ್ ಶೆಟ್ಟಿ ಬಸ್ರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಮುರಳೀಧರ್ ಶೆಟ್ಟಿ ಹುಯ್ಯಾರು, ಕೋಶಾಧಿಕಾರಿ ಭರತ್ ರಾಜ್ ಶೆಟ್ಟಿ ಜಾಂಬೂರು, ಶ್ರೀ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಶ್ರೀ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.