ಕುಂದಾಪುರ (ಜು.25): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ಬಸ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ 5 ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರ ಸಂಪನ್ನಗೊoಡಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮ್ಯಾಜಿಕ್ ಬಸ್ ಫೌಂಡೇಶನ್ನ ಹಿರಿಯ ತರಬೇತುದಾರರಾದ ಶ್ರೀ ಜೋಶ್ವಾ ಡೇನಿಯಲ್ ಅತಿಥಿ ನೆಲೆಯ ಮಾತುಗಳನ್ನಾಡಿದರು.
ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಯಾದ ಶ್ರೀ ತಿಮ್ಮಪ್ಪ ಡಿ.ಎಸ್., ವೃತ್ತಿ ಮಾರ್ಗದರ್ಶನ ಘಟಕದ ಸಂಯೋಜಕರಾದ ಶ್ರೀ ಮಹೇಶ್ ಕುಮಾರ್, ಶ್ರೀ ರಜತ್ ಬಂಗೇರ ಉಪಸ್ಥಿತರಿದ್ದರು.

ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನುö ಹಂಚಿಕೊAಡರು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಾದ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ, ಸನ್ಮಿತಾ ವಂದಿಸಿ, ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.











