ಗಂಗೊಳ್ಳಿ ( ಆ ,26): ಕೆನರಾ ಬ್ಯಾಂಕ್, ಗಂಗೊಳ್ಳಿ ವತಿಯಿಂದ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಏಳನೆಯ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಯೋಗೇಶ್ ಎನ್ ಸಕ್ಲಾತಿ ದ್ವಿತೀಯ ಸ್ಥಾನವನ್ನು ಅಪೂರ್ವ ಖಾರ್ವಿ ತೃತೀಯ ಸ್ಥಾನವನ್ನು ಪಡೆದರು. ಗಂಗೊಳ್ಳಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ವಾಸು ದೇವಾಡಿಗ ಬಹುಮಾನಗಳನ್ನು ವಿತರಿಸಿದರು. ಶಾಲಾ ಎಸ್ಡಿಎಂಸಿ ಬಳಗ, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.











