ಏನೆಂದು ಕರೆಯಲಿ ನಿನ್ನ?
ನೀ ನನ್ನ ಬಾಳಲಿ ತುಂಬಿದೆ ಬಣ್ಣ.
ಆಚಾರ ವಿಚಾರಗಳನ್ನು ತಿಳಿಸಿದ ಆಚಾರ್ಯನೇ?
ಅಧ್ಯಯನದ ಕಡೆಗೆ ಧ್ಯಾನ ಹರಿಸಿದ ಅಧ್ಯಾಪಕನೇ?
ವಿದ್ಯೆಯನ್ನು ಧಾರೆಯರಿಸಿದ ಉಪಾಧ್ಯಾಯನೇ?
ಮನ ಪೀಡಿತರನ್ನು ಪ್ರಜ್ಞೆ – ಪಾಂಡಿತ್ಯದಿಂದ ಪೋಷಿಸಿದ ಪಂಡಿತನೇ?
ಶಿಕ್ಷೆ ಇಂದ ಜೀವನವನ್ನು ರೂಪಿಸಿದ ಶಿಕ್ಷಕನೇ?
ಶಸ್ತ್ರಾಸ್ತ್ರ – ಶಾಸ್ತ್ರಗಳನ್ನು ಕಲಿಸಿದ ಶಾಸ್ತ್ರಿಯೇ?
ಜ್ಞಾನ ಗಂಗೆಯನು ಗೆದ್ದ ಜ್ಞಾನಿಯೇ?
ನುಡಿದಂತೆ ನಡೆದ ಮಹನಿಯೇ?
ನನ್ನ ಎಳಿಗೆಯ ಮೇಲೆ ಸದಾ ಇರುವುದು ನಿನ್ನ ಗಮನ
ಲಗುವಾಗಿ ಬಾಳನ್ನು ಬೆಳಗಿಸಿದ ಗುರುವೇ
ನಿನಗೆ ಕೋಟಿ ಕೋಟಿ ನಮನ.

ಡಾ. ಉಮ್ಮೆ ಸಲ್ಮಾ ಎಂ
ಸಹ ಪ್ರಾಧ್ಯಾಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು










