ಕುಂದಾಪುರ (ಸೆ. 8 ) : ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್. ಎಮ್ ಮತ್ತು ವಿ. ಕೆ.ಆರ್ ಶಾಲೆಗಳ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ 9ನೇ ತರಗತಿಯ ಅಬ್ದುಲ್ ರೆಹಮಾನ್ ಸೌತ್ ಇಂಡಿಯಾ ಕರಾಟೆ ಫೆಡರೇಶನ್ ಬೆಂಗಳೂರು ಇವರು ಆಯೋಜಿಸಿದ 4th ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನ 14ರ ವಯೋಮಾನದ ಬಾಲಕರ ವಿಭಾಗದ ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.

ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಅಭಿನಂದಿಸಿದರು.










