ಕುಂದಾಪುರ (ಸೆ. 19): ಕೊಡಗಿನ ನಾಟ್ಯಮಯೂರಿ ನೃತ್ಯ ಟ್ರಸ್ಟ್,ವೀರಾಜಪೇಟೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ರಾಷ್ಟ್ರದ ಪ್ರಥಮ ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿ ಬಾ ಫುಲೆಯವರ ಹೆಸರಿನಲ್ಲಿ ಕೊಡಮಾಡುವ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಗೆ ಬಸ್ರೂರಿನ ನಿವೇದಿತಾ ಪ್ರೌಢಶಾಲೆಯ ಶಿಕ್ಷಕ ಕೆ ,ಪ್ರದೀಪ್ ಕುಮಾರ್ ಶೆಟ್ಟಿ ಕಾವ್ರಾಡಿ ಆಯ್ಕೆಯಾಗಿದ್ದಾರೆ.


ಇದೇ ಸೆಪ್ಟೆಂಬರ್, 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯ ನಯನಾ ಸಭಾ ಭವನದಲ್ಲಿ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇವರು ನರಸಿಂಹ ಶೆಟ್ಟಿ ಹಾಗೂ ಸಲ್ವಾಡಿ ಪ್ರೇಮ ಎನ್ ಶೆಟ್ಟಿ ಕಲ್ಲೋಳಿ ಮನೆ ಕಾವ್ರಾಡಿ ದಂಪತಿಗಳ ಪುತ್ರ.













