ಹೆಮ್ಮಾಡಿ(ಆ. 05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 70ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆ(ರಿ.), ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ಜಯರಾಣಿ ವೃದ್ಧಾಶ್ರಮದಲ್ಲಿ ಆಕ್ಟೋಬರ್ 05 ರಂದು ಆಚರಿಸಲಾಯಿತು.

ಸಿಹಿ ಹಂಚುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ವೃದ್ಧಾಶ್ರಮದ ಸಂಯೋಜಕರಾದ ಸಿಸ್ಟರ್ ಸೀಟಾ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ರಾಜು ಶ್ರೀಯಾನ್ ಗುಜ್ಜಾಡಿ, ಗೌರವಾಧ್ಯಕ್ಷ ಲೋಹಿತಾಶ್ವ ಆರ್ .ಕುಂದರ್, ಕಾರ್ಯದರ್ಶಿ ಜಗದೀಶ್ ನೆಂಪು ಮೊಗವೀರ ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷರಾದ ಶ್ಯಾಮಲ ಜಿ. ಚಂದನ್, ಬೇಬಿ. ಜಿ. ನೈಕ್ , ಗೋಪಾಲ್ ಚಂದನ್ ,ರಾಘವೇಂದ್ರ ಮೊಗವೀರ , ಶ್ರೇಯಾ ಹಾಗೂ ಭರತ್ ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿ ನಿರೂಪಿಸಿದರು.











