ಬಸ್ರೂರು ಹಿಂದೆ ಗತವೈಭವ ಮೆರೆದ ಸ್ಥಳ. ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಇತಿಹಾಸದ ಚಿತ್ರಣವನ್ನೂ ತಿಳಿಸುತ್ತದೆ. ಆಳುಪ, ವಿಜಯನಗರ, ಕೆಳದಿಯಂತಹ ಆಳ್ವಿಕೆ ನಡೆಸಿದ ಪ್ರದೇಶ ಬಸ್ರೂರು. ಬಾರಕೂರು ತನ್ನ ರಾಜಧಾನಿಯನ್ನಾಗಿ ಮಾಡಿ ಬಸ್ರೂರು ವ್ಯಾಪಾರದ ಕೇಂದ್ರವನ್ನಾಗಿ ಆಳುಪರು ಆಳ್ವಿಕೆ ನಡೆಸುತ್ತಿದ್ದರು. ಬಾರಕೂರು ಹಾಗೂ ಬಸ್ರೂರು ಅವಳಿ ಪ್ರದೇಶವೆಂದು ಕರೆಯುತ್ತಿದ್ದರು.
ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸುಭದ್ರವಾಗಿ ಆಳ್ವಿಕೆ ನಡೆಸಿದ ರಾಜ ಮನೆತನ, ವಿಜಯನಗರ ಆಳ್ವಿಕೆ ನಡೆಸಿದ ಪ್ರಸಿದ್ಧ ಪ್ರದೇಶ ಕೂಡಾ ಬಸ್ರೂರು. ಕರಾವಳಿಯ ಮುಖ್ಯ ಬಂದರು ಪ್ರದೇಶವಾಗಿರುವ ಬಸರೂರು, ಇಲ್ಲಿಯ ವ್ಯಾಪಾರಗಳಿಗೆ ವಿದೇಶಿಗರೂ ಕೂಡಾ ಆಕರ್ಷಿತರಾಗಿ ವ್ಯಾಪಾರಕ್ಕೆಂದು ಬರುತ್ತಿದ್ದರು. ವ್ಯಾಪಾರದ ಚಿಂತನೆಯಿಂದ ಕ್ರಿ.ಶ ೧೫೨೫, ರಲ್ಲಿ ಪೋಚು೯ಗೀಸರ ಆಗಮನ. ಸ್ಥಳೀಯ ವರ್ತಕ ರೊಂದಿಗೆ ವ್ಯವಹಾರ ಪ್ರಾರಂಭಿಸಿ ಇಲ್ಲಿಯ ಬಂದರು ನೋಡಿಕೋಳ್ಳುವ ವ್ಯವಹಾರಿಕ ಕೆಲಸಗಳಿಗೆ ಮುಂದಾಗಿ ನೋಡಿಕೊಳ್ಳುತ್ತಿದ್ದರು. ವಿದೇಶೀ ಚಿಂತನೆ ತನ್ನ ಮೂಲ ದೇಶ ಉನ್ನತೀಕರಿಸುವುದು ಆಗಿತ್ತು. ವ್ಯಾಪಾರಕ್ಕೆಂದು ಬಂದ ಪೋರ್ಚುಗೀಸರು ಬಸರೂರು ಪ್ರದೇಶವನ್ನು ಸಂಪುರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದು ಕೊಳ್ಳವಲ್ಲಿ ಯಶಸ್ವಿಯಾಗುತ್ತಾರೆ.
ಕ್ರಿ.ಶ ೧೫೮೩ರಲ್ಲಿ ಕೊಂಡೇಶ್ವರ(ಕುಂದೇಶ್ವರ) ದೇವಾಲಯಕ್ಕೆ ಬೆಂಕಿ ಇಟ್ಟು ಅವರ ಕರಾಳ ಮುಖ ದರ್ಶನ ನೀಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಹೋರಾಟಕ್ಕೆ ಮುಂದಾದರೂ ಎಲ್ಲಾ ಸಮಸ್ಯೆಗಳನ್ನ ಬಹಳ ಚಾಣಾಕ್ಷತೆ ಯಿಂದ ಬಗೆ ಹರಿಸಿಕೊಳ್ಳುತ್ತಾರೆ. ಬಸರೂರು ಕೆಳದಿಯರ ಆಳ್ವಿಕೆಯ ಕಾಲದಲ್ಲಿ ಉತ್ತಮವಾಗಿತ್ತು. ಪೋಚು೯ಗೀಸರ ಉಪಟಳಕ್ಕೆ ಅನೇಕ ಬಾರಿ ಸೋಲಿಸಿದರೂ ಸುಮ್ಮನಿದ್ದು ಮತ್ತೆ ಮತ್ತೆ ಸಮಸ್ಯೆ ನೀಡುತ್ತಾರೆ.
ಮಂಗಳೂರು ಬಂದರೂ ಪ್ರದೇಶವನ್ನೂ ಕೂಡಾ ಪಡೆಯಬೇಕು ಎನ್ನುವ ಕಾರ್ಯ ಗಳಿಗೂ ತಣ್ಣೀರು ಎರಚಿದಂತೆ ಸೋಲು ಕಂಡರು. ಡಚ್ಚರು ಕೂಡಾ ವ್ಯಾಪಾರಕ್ಕಾಗಿ ಬಸ್ರೂರಿಗೆ ಬಂದು ಬಂಡ ಶಾಲೆಗಳನ್ನು ಪ್ರಾರಂಭಿಸಿದ್ದರು.
ಪೋರ್ಚುಗೀಸರಿಗೆ ಒಂದು ಕಡೆ ಕೈ ತಪ್ಪಿ ಹೋದ ಮಂಗಳೂರು ಬಂದರು, ಹಾಗೂ ಡಚ್ಚರ ಉಪಟಳಕ್ಕೆ ವಿಪರೀತ ತೆರಿಗೆಯನ್ನು ಬಸೂರಿನ ಜನರ ಮೇಲೆ ಹೇರುತ್ತಾರೆ.
ಪೋಚು೯ಗೀಸರ ಒಳ ಗುಟ್ಟು ಹೊರ ಬಂದಂತೆ ಒಂದೊಂದೇ ಗುಣಗಳು ಪ್ರದರ್ಶನವಾಗತೊಡಗುತ್ತದೆ. ಮಂದಿರಗಳಿಗೆ ಬೆಂಕಿ, ವಿಪರೀತ ತೆರಿಗೆ,ಬಸ್ರೂರಿನ ವ್ಯಾಪಾರದ ಸಂಪೂಣ೯ ಹಿಡಿತ ತನ್ನ ಸ್ವಾದೀನಕ್ಕೆ ತಂದುಕೊಂಡ ಪೊಚು೯ಗೀಸರು ತನ್ನ ಕಡಿವಾಣದೊಳಗೆ ಹಿಡಿದಿಟ್ಟುಕೊಂಡು ಬಂಧನದೊಳಗೆ ಇರುವಂತೆ ಮಾಡಿದ್ದರು.
ಈ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಗಮನದ ಬಸ್ರೂರ ಕಡೆ ಆಗುತ್ತದೆ. ಸಿಂಧೂ ದುಗಾ೯ ಕೋಟೆ ಸ್ಥಾಪನೆಯಾಯಿತು .ಹಾಗೂ ಸುಣ೯ದುಗಾ೯ ಕೋಟೆ ಸ್ಥಾಪನೆಯಾಗಿತ್ತು. ಶಿವಾಜೀಗೂ ಪೋಚು೯ಗೀಸರು, ಡಚ್ಚರಿಗೂ ಆಗುತ್ತಿರಲಿಲ್ಲ. ಇವರಿಬ್ಬರೂ ಯಾವ ಪ್ರದೇಶಗಳಿಗೆ ಹೋಗಿದ್ದಾರೊ ಅಲ್ಲಿ ಶಿವಾಜಿ ಪೊಚು೯ಗೀಸರ ಮೇಲೆ ಧಾಳಿ ಮಾಡುತ್ತಾರೆ.
ಶಿವಾಜಿ ಆಗಮನದ ಕಾಲದಲ್ಲಿ ಬಸ್ರೂರನ್ನು ಕೆಳದಿಯ ಅಧಿನದಲ್ಲಿತ್ತು. ತನ್ನ ನೌಕಾ ಸೇನೆಯ ಮೂಲಕ ಗುಲ್ಖತ್, ತರಂದೆ, ಯಂತಯ ಹೆಸರುಗಳಿದ್ದವು. ಗೋಕಣ೯ದ ಕಡೆ ತೆರಳಬೇಕೇಂದಿದ್ದ ಶಿವಾಜಿ ೧೬೬೫ ರ ಫೆಬ್ರವರಿ ೧೩ ರಲ್ಲಿ ಬಸರೂರಿಗೆ ತನ್ನ ನೌಕಾ ಸೈನದೊಂದಿಗೆ ಬಂದು ಬಸ್ರೂರಿನಲ್ಲಿ ಇರುವ ಪೊಚು೯ಗೀಸರಿಂದ ಬಂಧ ಮುಕ್ತಗೊಳಿಸಿ ಸ್ವಾತಂತ್ರ್ಯ ನೀಡುತ್ತಾರೆ.
ಫೆಬ್ರವರಿ ೧೩ರಲ್ಲಿ ಆಗಮಿಸಿದ ಶಿವಾಜಿ ೧೪ ರಂದು ನೇರವಾಗಿ ಗೋಕರ್ಣದ ಕಡೆ ಪ್ರಯಾಣ ಬೆಳೆಸುತ್ತಾರೆ. ವಿಜಯ ಸಾಧಿಸಿ ಸ್ಧಳೀಯ ನೋಡಿಕೋಳ್ಳಲು ಹೇಳುತ್ತಾರೆ.
ಪೊಚು೯ಗೀಸರಿಂದ ಬಂಧನದೊಳಗಿದ್ದ ಬಸ್ರೂರು ಬಂಧ ಮಕ್ತಿಗೊಳಿಸಿದ ಕಾರಣದಿಂದ ಬಸರೂರು (ಬಸ್ರೂರು) ಇಂದಿಗೂ ಸ್ವಾತಂತ್ರ್ಯದ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ವಿಷಯಕ್ಕೆ ಸಂಭಂಧಿಸಿದಂತೆ ಫೆಬ್ರವರಿ 21 ರ ಭಾನುವಾರ ಬಸ್ರೂರು ಕಾಲೇಜು ಮೈದಾನದಲ್ಲಿ ಯುವಾ ಬ್ರಿಗೇಡ್ ವತಿಯಿಂದ “ಕನ್ನಡ ನೆಲದಲ್ಲಿ ಛತ್ರಪತಿ ಶಿವಾಜಿ” ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾಯ೯ಕ್ರಮ ದ ವಿಶೇಷವಾಗಿ ರಾಜ್ಯ ಮೂಲೆ ಮೂಲೆಗಳಿಂದ ತರುಣರು ಬಸ್ರೂರಿನ ಕಡೆ ಬೈಕ್ ರ್ಯಾಲಿಯಲ್ಲಿ ಬರಲಿದ್ದಾರೆ, ಸಂಜೆ 4 ಕ್ಕೆ ಅದ್ದೂರಿ “ಶೋಭಾಯಾತ್ರೆ” ನಡೆಯಲಿದೆ. ಬೃಹತ್ “ಶಿವಾಜಿಯ ಪ್ರತಿಮೆ ಅನಾವರಣ” ಕಾರ್ಯ ನಡೆಯಲಿದೆ. ಇನ್ನು ಬೃಹತ್ ಗಾತ್ರದ ಕೊಲಾಜ್ ನಿರ್ಮಾಣವಾಗಲಿದ್ದು ಅದು ಅಂದು ವಿಶ್ವ ಧಾಖಲೆಯಾಗಲಿದೆ. ಈ ಕಾರ್ಯಕ್ರಮಕ್ಕೆ ವಿಶೇಷ ಗಣ್ಯರಾಗಿ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀಥ೯ರು ಪೇಜಾವರ ಮಠ, ಉಡುಪಿ, ಶ್ರೀ ಸಂತೋಷ್ ಜೀ (ರಾಷ್ಟ್ರೀಯ ಪ್ರಧಾನ ಕಾಯ೯ದಶಿ೯ ಭಾರತೀಯ ಜನತಾ ಪಾಟಿ೯), ಶ್ರೀ ಬಿ. ಅಪ್ಪಣ್ಣ ಹೆಗ್ಡೆ (ಆಡಳಿತ ಧಮ೯ದಶಿ೯ ಮಹಾತೋಬಾರ ಮಹಾಲಿಂಗೇಶ್ವರ ದೇವಾಲಯ ಬಸ್ರೂರು) ಯುವಾ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ ಚಕ್ರವತಿ೯ ಸೂಲಿಬೆಲೆ ಇವರು ದಿಕ್ಷೂಚಿ ಭಾಷಣ ಮಾಡಲಿದ್ದಾರೆ.
ಪ್ರಕಟಣೆ: ಯುವ ಬ್ರಿಗೇಡ್ ಕುಂದಾಪುರ