ಕುಂದಾಪುರ (ಫೆ.16): ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಆದರ್ಶ ಆಸ್ಪತ್ರೆ ಕುಂದಾಪುರ, ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 14 ರಂದು ಆದರ್ಶ ಆಸ್ಪತ್ರೆ ಕುಂದಾಪುರ ದಲ್ಲಿ ಪುಲ್ವಾಮ ದಾಳಿಯಲ್ಲಿ ಮೃತರಾದ ವೀರ ಯೋಧರ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನಿ ಹಾಗೂ ಕುಂದಾಪುರದ ಪ್ರಸಿದ್ಧ ಮೈಕ್ ಪ್ರಚಾರಕರಾದ ಸುರೇಂದ್ರ ಕಾಂಚನ್ ಸಂಗಮ್ ರವರನ್ನು ಸನ್ಮಾನಿಸಲಾಯಿತು. ಇವರು ಸತತ 35 ಬಾರಿ ರಕ್ತದಾನ ಮಾಡಿರುವುದು ಪ್ರಶಂಸನೀಯ.