ಕುಂದಾಪುರ(ಡಿ.29): ಮಾತೆ ಶಾರದಾದೇವಿಯ ಜನ್ಮ ಜಯಂತಿಯ ಪ್ರಯುಕ್ತ “ಅಮ್ಮ ನಮನ” ಹೆಸರಿನಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಸತತ 6 ವರ್ಷಗಳಿಂದರಾಜ್ಯಾದ್ಯಂತ ಯುವಾಬ್ರಿಗೇಡ್ ಆಯೋಜಿಸುತ್ತಾ ಬಂದಿದೆ. ಅದರಂತೆಯೇ ಈ ವರ್ಷವೂ ಸಹ ವಿಶೇಷವಾಗಿ ಸೈನಿಕರ ತಾಯಂದಿರ ಪಾದಪೂಜೆ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ,ಆ ಹಿನ್ನೆಲೆಯಲ್ಲಿ ಡಿ.28 ರ ಮಂಗಳವಾರ ಯುವಾಬ್ರಿಗೇಡ್ ಕುಂದಾಪುರದ ವತಿಯಿಂದ ಕೋಡಿಯ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಅವರವರ ಮಾತೆಯರಿಗೆ ಪಾದಪೂಜೆ ಮಾಡಿಸುವ ಮೂಲಕ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ […]
Tag: yuva brigade kundapura
ತಲ್ಲೂರು ಸರಕಾರಿ ಪ್ರೌಢ ಶಾಲೆ: ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ
ತಲ್ಲೂರು(ನ,16): ಪ್ರತಿಷ್ಠಿತ ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಯುವಾ ಬ್ರಿಗೇಡ್ ನ ಬೃಹತ್ ಯೋಜನೆಯಾದ ಕೈ ಹಿಡಿದು ನಡೆಸೆನ್ನನು ಎನ್ನುವ ಯೋಜನೆಯಡಿ ರಾಜ್ಯದ 50 ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ಕನ್ನಡದಲ್ಲೇ ಗ್ರಹಿಕೆ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಪ್ರಯುಕ್ತ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಕುಂದಾಪುರ ತಾಲ್ಲೂಕಿನ ತಲ್ಲೂರು ಸರಕಾರಿ ಪ್ರೌಢ ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯ […]
ಕುಂದಾಪುರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ಪಂಜಿನ ಮೆರವಣಿಗೆ
ಕುಂದಾಪುರ (ಅ,23): ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳಾದ ಮಂದಿರಗಳ ದ್ವಂಸ ಕೃತ್ಯ ಗಳು, ಹದಿಹರೆಯದ ಹೆಣ್ಣುಮಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರಗಳು, 38ಕ್ಕೂ ಅಧಿಕ ಹಿಂದೂ ಮನೆಗಳನ್ನ ಬೆಂಕಿಗೆ ಆಹುತಿ ಮಾಡಿ 100ಕ್ಕೂ ಅಧಿಕ ಮನೆಗಳನ್ನ ಧ್ವಂಸ ಮಾಡಿರುವಂತಹ ಹೇಯ ಕೃತ್ಯವನ್ನ ಖಂಡಿಸಿ ಅ,23 ಶನಿವಾರ ಸಂಜೆ 7:30ರಿಂದ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು. ಶಂಕರ್ ಅಂಕದ ಕಟ್ಟೆಯವರು, […]
ಯುವಾ ಬ್ರಿಗೇಡ್ ಕುಂದಾಪುರ : ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ವಿತರಣೆ
ಕುಂದಾಪುರ (ಜೂ, 10): ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ “ಗುರು ಗೌರವ” ಎನ್ನುವ ಶೀರ್ಷಿಕೆಯಡಿಯಲ್ಲಿ ವೇತನವಿಲ್ಲದ, ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯ ತನಕ ಸುಮಾರು 13000 ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಯುವಾಬ್ರಿಗೇಡ್ ಕುಂದಾಪುರ ತಂಡದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನಾ ಕಾರಣದಿಂದ ಶಾಲೆಗಳು ನಡೆಯದೆ, ಅನೇಕ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಗುರುತಿಸಿ , ಸರಿ ಸುಮಾರು […]
ಯುವ ಬ್ರಿಗೇಡ್ ಸ್ವಚ್ಚತಾ ಕಾರ್ಯದ ಪ್ರತಿಫಲ : ಸಂಪೂರ್ಣ ಮುಚ್ಚಿ ಹೊಗಿದ್ದ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯಕ್ಕೆ ಗ್ರಾಮಸ್ಥರಿಂದ ಕಟ್ಟೆ ಪೂಜೆ
ಕುಂದಾಪುರ (ಏ, 18) : 500 ವರ್ಷ ಇತಿಹಾಸ ಹೊಂದಿರುವ ಸಂಪೂರ್ಣ ಮುಚ್ಚಿ ಹೋಗಿರುವ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯವನ್ನು ಕಳೆದ ವರ್ಷ ಯುವಾಬ್ರಿಗೇಡ್ ವತಿಯಿಂದ ಊರವರ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.ತದ ನಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಇದರ ಫಲವಾಗಿ ಇತ್ತೀಚೆಗೆ ಊರವರೆಲ್ಲ ಸೇರಿ ಕಟ್ಟೆ ಪೂಜೆ ನೆರವೇರಿಸಿದ್ದಾರೆ.ಮಣ್ಣಿನಲ್ಲಿ ಹುದುಗಿಹೋಗಿದ್ದ ಬಸ್ರೂರಿನ ಈ ಗುಪ್ಪಿ ಸದಾನಂದ ದೇವಾಲಯ ಇಂದು ಭಕ್ತಿ ಪ್ರಿಯ ಕ್ಷೇತ್ರವಾಗುತ್ತದೆ . […]
ಯುವಾ ಬ್ರಿಗೇಡ್ ವತಿಯಿಂದ ವಿನೂತನ ಕಾರ್ಯಕ್ರಮ
ಕುಂದಾಪುರ (ಮಾ. 29): ಇದೇ ಎಪ್ರಿಲ್ 4 ರ ಭಾನುವಾರದಂದು ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ನ ಕಾರ್ಯಕರ್ತರು ಹಳೆಯ, ಬದಿಗಿಟ್ಟ, ಬೀದಿಯಲ್ಲಿ ಅನಾಥವಾಗಿ ಬಿದ್ದಿರುವ ದೇವರ ಫೋಟೊಗಳ ವಿಲೇವಾರಿ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. “ಕಣ ಕಣದಲ್ಲೂ ಶಿವ” ಎನ್ನುವ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಟ್ಟೆಯ ಬಳಿ, ಫುಟ್ ಪಾತ್ ನ ಮೇಲೆ ಬಿಟ್ಟುಹೋಗಿರುವ ದೇವರ ಫೋಟೋಗಳನ್ನು ವಿಲೇವಾರಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗುವ ಸಂಕಲ್ಪ ಹೊಂದಿದ್ದಾರೆ.
ಕನ್ನಡ ನೆಲದಲ್ಲಿ ಛತ್ರಪತಿ ಶಿವಾಜಿ
ಬಸ್ರೂರು ಹಿಂದೆ ಗತವೈಭವ ಮೆರೆದ ಸ್ಥಳ. ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಇತಿಹಾಸದ ಚಿತ್ರಣವನ್ನೂ ತಿಳಿಸುತ್ತದೆ. ಆಳುಪ, ವಿಜಯನಗರ, ಕೆಳದಿಯಂತಹ ಆಳ್ವಿಕೆ ನಡೆಸಿದ ಪ್ರದೇಶ ಬಸ್ರೂರು. ಬಾರಕೂರು ತನ್ನ ರಾಜಧಾನಿಯನ್ನಾಗಿ ಮಾಡಿ ಬಸ್ರೂರು ವ್ಯಾಪಾರದ ಕೇಂದ್ರವನ್ನಾಗಿ ಆಳುಪರು ಆಳ್ವಿಕೆ ನಡೆಸುತ್ತಿದ್ದರು. ಬಾರಕೂರು ಹಾಗೂ ಬಸ್ರೂರು ಅವಳಿ ಪ್ರದೇಶವೆಂದು ಕರೆಯುತ್ತಿದ್ದರು. ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸುಭದ್ರವಾಗಿ ಆಳ್ವಿಕೆ ನಡೆಸಿದ ರಾಜ ಮನೆತನ, ವಿಜಯನಗರ ಆಳ್ವಿಕೆ ನಡೆಸಿದ ಪ್ರಸಿದ್ಧ ಪ್ರದೇಶ ಕೂಡಾ ಬಸ್ರೂರು. […]
ಯುವಾ ಬ್ರಿಗೇಡ್ ಕುಂದಾಪುರ : ಜೈ ಹಿಂದ್ ರನ್ ಮ್ಯಾರಥಾನ್
ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಇವರ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ದಿನದ ಅಂಗವಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜನವರಿ 23 ರ ಶನಿವಾರ ಜಯ್ ಹಿಂದ್ ರನ್ ಮ್ಯಾರಥಾನ್ ನಡೆಯಿತು.