ಕುಂದಾಪುರ(ಡಿ,06): ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಡಿ.6 ಶನಿವಾರ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವಿಯ ದರ್ಶನ ಪಡೆದರು.

ಶ್ರೀಕ್ಷೇತ್ರ ಬಗ್ವಾಡಿ ಪ್ರಗತಿಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ ಶ್ರೀಗಳು ಮುಂದಿನ ದಿನದಲ್ಲಿ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಈ ಪುಣ್ಯ ಬಗ್ವಾಡಿ ಮಹಿಷಾಸುರಮರ್ದಿನಿ ಕ್ಷೇತ್ರದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ನೆರವೇರಲಿ ಎಂದು ಹಾರೈಸಿದರು. ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ ಅಡಳಿತ ಮಂಡಳಿಯ ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ ದೇವಸ್ಥಾನದ ವತಿಯಿಂದ ಸ್ವಾಮೀಜಿಯವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉದ್ಯಮಿ, ವರಲಕ್ಷಿ ಚಾರಿಟೇಬಲ್ ಟ್ರಸ್ಟ್À ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ, ಧಾರ್ಮಿಕ ಮುಂದಾಳು ನರಸಿಂಹ ಪೂಜಾರಿ ಪಡುಕೋಣೆ, ಕರಣ್ ಪೂಜಾರಿ ತಲ್ಲೂರು, ಅನೂರ್ ನಾಗೂರು, ರಮೇಶ್ ಕುಂದರ್ ವಿ ಕೋಟ, ಲೋಹಿತಾಶ್ವ ಆರ್ ಕುಂದರ್, ಆನಂದ್ ಕೆ ಮೊಗವೀರ, ಗಜೇಂದ್ರ ಬಗ್ವಾಡಿ, ಹೆಮ್ಮಾಡಿ ಘಟಕ ಅಧ್ಯಕ್ಷ ದಿನೇಶ್ ಬಿ ಕಾಂಚನ್, ಜಯಂತ್ ಕುಂದರ್, ದೇವಸ್ಥಾನದ ಸಿಬ್ಬಂದಿಗಳಾದ ವಾಸು ಜಿ ನಾಯ್ಕ್, ರಾಘವೇಂದ್ರ ಕಾಂಚನ್, ಪವಿತ್ರ ಉಪಸ್ಥಿತರಿದ್ದರು.










