ಕೊಲ್ಲೂರು( ಡಿ.12): ಇತ್ತೀಚಿಗೆ ಸುಬ್ರಹ್ಮಣ್ಯ ನೆಡೆದ ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು ಪ್ರಥಮ ಸ್ಥಾನ ಪಡೆಯಿತು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಕೊಲ್ಲೂರಿನ ಗಣೇಶ ಕೆ. ಆರ್.ದ್ವಿತೀಯ ಕಲಾ ವಿಭಾಗ, ನಿರೂಪ ಪಿ.ದ್ವಿತೀಯ ವಾಣಿಜ್ಯ ವಿಭಾಗ, ದಿಗಂತ ಎಂ.ಡಿ,ದ್ವಿತೀಯ ವಾಣಿಜ್ಯ ವಿಭಾಗ
ಯಶಸ್ ಎಂ. ಕೆ, ದ್ವಿತೀಯ ಕಲಾ ವಿಭಾಗ, ರೋಹಿತ್ ಸಿ.ಕೆ,ದ್ವಿತೀಯ ಕಲಾ ವಿಭಾಗಇವರು ಡಿಸೆಂಬರ್ 25 ರಿಂದ 30 ತನಕ ನೆಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ , ಕಾರ್ಯದರ್ಶಿ ಪ್ರಶಾಂತ್ ಕುಮಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರು, ಹಾಗೂ ಕಾಲೇಜಿನ ಸಿಬ್ಬಂದಿಗಳು ,ವಿದ್ಯಾರ್ಥಿಗಳು, ಗ್ರಾಮಸ್ಥರು ಅಭಿನಂದನೆ ಹಾಗೂ ಶುಭ ಕೋರಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ , ಬಿ . ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











