ಕುಂದಾಪುರ, ಮಾರ್ಚ್ (09) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟಿ ಆಶ್ರಯದಲ್ಲಿ ಜೇಸಿಐ ಕುಂದಾಪುರ ಸಿಟಿ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು.
ಕುಂದಾಪುರ ಆರಕ್ಷಕ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಶಾಹೀನಾ, ಪೊಲೀಸ್ ಕಾನ್ಸ್ಟೇಬಲ್ ಆಶ್ರಿತ ದೇವಾಡಿಗ, ವಿದ್ಯಾರ್ಥಿ ಸಾಧಕರಾದ ಸಾಂಸ್ಕೃತಿಕ ಪ್ರತಿಭೆ ಶಬರಿ ಪೂಜಾರಿ, ಶೈಕ್ಷಣಿಕ ಪ್ರತಿಭೆ ಸೌಭಾಗ್ಯ ಕಿಣಿ, ಕ್ರೀಡಾ ಪ್ರತಿಭೆ ಅಪೇಕ್ಷಾ ಆಚಾರ್ ಹಾಗೂ ಸಾಹಿತ್ಯ ಪ್ರತಿಭೆ ರಶ್ಮಿ ಉಡುಪ ಇವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಪ್ರಾಸ್ತಾವಿಸಿದರು. ಕುಂದಾಪುರ ಸಿಟಿ ಜೇಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್ ಆಶಯ ನುಡಿಗಳನ್ನಾಡಿದರು. ಜೇಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ಥ, ಜೇಸಿಐ ಕುಂದಾಪುರ ಸಿಟಿಯ ನಿಕಟಪೂವ೯ ಅಧ್ಯಕ್ಷೆ ಡಾ| ಸೋನಿ ಡಿ’ ಕೋಸ್ಟ, ಲೇಡಿ ಜೆಸಿಐ ಚೇರ್ ಪರ್ಸನ್ ರೇಷ್ಮಾ, ಮಹಿಳಾ ಸಬಲೀಕರಣ ಘಟಕ ಸಂಯೋಜಕರಾದ ಡಾ| ದೀಪಾ ಮತ್ತು ಎನ್.ಎಸ್.ಎಸ್ ಯೋಜನಾಧಿಕಾರಿ ದೀಪಾ ಪೂಜಾರಿ ಉಪಸ್ಥಿತರಿದ್ದರು. ಸನ್ಮಾನಿತರನ್ನು ಪ್ರಾಧ್ಯಾಪಕರಾದ ನಿರ್ಮಲ, ಮಾಲತಿ, ಜಯಲಕ್ಷ್ಮಿ, ರೇವತಿ ಕುಲಾಲ್, ಜೂನಿಯರ್ ಚೇರ್ ಪರ್ಸನ್ ಕಿರಣ್ ಹಾಗೂ ಜೇಸಿ ರೇಷ್ಮಾ ಡಿ. ಕುನ್ಹಾ ಪರಿಚಯಿಸಿದರು.
ಈ ಸಂದರ್ಭ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಅವಳು” ಎಂಬ ವಿಷಯದ ಕುರಿತು ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸುಜಯ್ ಕುಮಾರ್, ರಕ್ಷತ್ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಉದ್ಭವಿ ಮತ್ತು ಅನ್ನಪೂರ್ಣೇಶ್ವರಿ, ವಿನಯಾಶ್ರೀ ಮತ್ತು ನಾಗಶ್ರೀ, ಶರತ್ ಮತ್ತು ವಿಕಾಸ್ ಹಾಗೂ “ನೀ ನಾಯಕಿ” ಎಂಬ ವಿಷಯದ ಕುರಿತು ಏರ್ಪಡಿಸಿದ ಕಿರು ಚಿತ್ರ ಸ್ಪಧೆ೯ಯಲ್ಲಿ ವಿಜೇತರಾದ ದ್ವಿತೀಯ ಬಿ.ಕಾಂ (ಡಿ), ತೃತೀಯ ಬಿಸಿಎ, ಪ್ರಥಮ ಬಿಕಾಂ (ಎ) ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲ ಮತ್ತು ಎನ್ಎಸ್ಎಸ್ ಯೋಜನಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ವೀಣಾ ವಾಸುದೇವ್ ಭಟ್ ವಂದಿಸಿ, ವಾಣಿಜ್ಯ ವಿಭಾಗದ ಪ್ರಾದ್ಯಾಪಕರಾದ ಶ್ವೇತಾ ಭಂಡಾರಿ ನಿರೂಪಿಸಿ, ಎನ್ಎಸ್ಎಸ್ ಸ್ವಯಂಸೇವಕಿ ವೈಷ್ಣವಿ ಎಂ.ಎಸ್ ಪ್ರಾರ್ಥಿಸಿದರು.