ಬೆಂಗಳೂರು (ಜ. 07): ಇಲ್ಲಿನ ಬಸವೇಶ್ವರ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಂದೀಪ್ ನಾಯರಿ ನೇತೃತ್ವದಲ್ಲಿ ಕ್ಯಾಟರಿಂಗ್, ಹೋಟೆಲ್, ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಮ್ಮಿಲನ ಟ್ರೋಫಿ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟ ವನ್ನು ಇತ್ತೀಚೆಗೆ ಆಯೋಜಿಸಲಾಯಿತು.



ಈ ಪಂದ್ಯಟದವನ್ನು ತುರುವೆಕೆರೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಯಕರ್ನಾಟಕ ಮುಖಂಡರಾದ ಪ್ರವೀಣ್ ಶೆಟ್ಟಿ ಮತ್ತು ಅನೀಲ್ ಶೆಟ್ಟಿ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್,ರಾಘವೇಂದ್ರ ಹಾರ್ಮಣ್ ಉಪಸ್ಥಿತರಿದ್ದರು.












