ಕುಂದಾಪುರ(ಫೆ. 04): ಇಲ್ಲಿನ ಕಂಡ್ಲೂರು ಜಿಯಾ ಪಬ್ಲಿಕ್ ಇಂಗ್ಲಿಷ್ ಮಧ್ಯಮ ಶಾಲೆಯ ಯುವ ಕರಾಟೆ ಪಟು ಮೊಹಮ್ಮದ್ ಸಫಾನ್ ಕರಾಟೆಯಲ್ಲಿ ಗಮನಾರ್ಹ ಸಾಧನೆಗೈದು ಜುಲೈನಲ್ಲಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಕರಾಟೆ ಗುರುಗಳಾದ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿಕೆ, ಮತ್ತು ಸಿಹಾನ್ ಶೇಖ್ ಬಸ್ರೂರ್ ರವರ ಮಾರ್ಗದರ್ಶನದಲ್ಲಿ ಈತ ತರಬೇತಿ ಪಡೆದಿದ್ದಾನೆ.ಈತ ಶೇಕ್ ಸಯ್ಯದ್ ಮಕ್ಬೂಲ್ ಮತ್ತು ಬಿಸ್ಮಿಲ್ಲಾ ಯಾಸ್ಮಿನ್ ರವರ ಪುತ್ರ.
ಕುಂದಾಪುರದ ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಈತ ಇತ್ತೀಚೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.