ಕುಂದಾಪುರ (ಫೆ.19): ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರಾಕ್ತನ ಸಂಘದ ಜಂಟಿ ಆಶ್ರಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಎನ್.ಇ.ಪಿ. ಪಠ್ಯಕ್ರಮದ ಅಡಿಯಲ್ಲಿ ಮಿನಿ ರಿಸರ್ಚ್ ಪ್ರಾಜೆಕ್ಟ್ನ ಬಗ್ಗೆ ರಿಸರ್ಚ್ ಕಾರ್ಯಾಗಾರ ಪ್ರಾಕ್ತನ ಯಾನ ಶೀರ್ಷಿಕೆಯಡಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾಲೇಜಿನ 2023–24ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ 6ನೇ ರ್ಯಾಂಕ್ ಪಡೆದ ಪ್ರಾಕ್ತನ ವಿದ್ಯಾರ್ಥಿನಿ ಕುಮಾರಿ ರಶ್ಮಿ ಉಡುಪ ಮೊಳಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಿಸರ್ಚ್ ಪ್ರಾಜೆಕ್ಟ್ಗಳು ಹೇಗೆ ಸಂಶೋಧನಾ ಕೌಶಲ್ಯವನ್ನು ಬಲಪಡಿಸುವುದರ ಜೊತೆಗೆ ಮುಂದಿನ ಶೈಕ್ಷಣಿಕ ಹಾಗೂ ಔದ್ಯೋಗಿಕ ಜೀವನಕ್ಕೆ ಉಪಯೋಗವಾಗಲಿದೆ ಎಂಬುದನ್ನು ತಿಳಿಸಿದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ಮಿನಿ-ರಿಸರ್ಚ್ ಪ್ರಾಜೆಕ್ಟ್ನ ಉದ್ದೇಶ ಹಾಗೂ ಅದರ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಯೋಗೀಶ್ ಶಾನುಭೋಗ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕಿ ಶ್ರೀಮತಿ ವಿನಯಾ ವಿ. ಶೆಟ್ಟಿ ವಂದಿಸಿದರು.
ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದೀಪಾ ಪೂಜಾರಿ, ಖಜಾಂಚಿ ಶ್ರೀ ಸಚಿನ್, ಸಂಘದ ಪದಾಧಿಕಾರಿಗಳು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ. ವಿದ್ಯಾರ್ಥಿ ಮಿಥಿಲೇಶ್ ಕಾರ್ಯಕ್ರಮ ನಿರೂಪಿಸಿದರು.










